ಸಾರಾ ಟೆಂಪಲ್‌ ರನ್‌- ಬಡವರಿಗೆ ಸಿಹಿ ಹಂಚಿದ ನಟಿ

Public TV
1 Min Read
sara ali khan

ಬಾಲಿವುಡ್ (Bollywood) ಬ್ಯೂಟಿ ಸಾರಾ ಅಲಿ ಖಾನ್‌ಗೆ (Sara Ali Khan) ಕೈಯಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗದೇ ಇದ್ರೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ದೇವಸ್ಥಾನದ ಬಳಿ ಬಡವರಿಗೆ ನಟಿ ಸಿಹಿ ಹಂಚಿದ್ದಾರೆ. ಸಾರಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಮುಂಬಯಿಯ ಜುಹುದಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಸಾರಾ ಭೇಟಿ ನೀಡಿದ್ದರು. ಈ ನಟಿಯ ‘ಮರ್ಡರ್ ಮುಬಾರಕ್’ ಮತ್ತು ‘ಏ ವತನ್ ಮೇರೆ ವತನ್’ ಸಿನಿಮಾಗಳು ರಿಲೀಸ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ನಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆವರಣದ ಹೊರಗೆ ಕುಳಿತಿದ್ದ ಬಡವರಿಗೆ ಸಿಹಿ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಇದನ್ನೂ ಓದಿ:ಮತ್ತೆ ಒಂದಾದ ‌’ಬಾವಲ್‌’ ಜೋಡಿ- ಜಾನ್ವಿ ಜೊತೆ ವರುಣ್‌ ಧವನ್‌ ರೊಮ್ಯಾನ್ಸ್

sara ali khan 1

ಈ ಸಂದರ್ಭದಲ್ಲಿ ತಮ್ಮನ್ನು ಸುತ್ತುವರಿದ ಪಾಪರಾಜಿಗಳಿಗೆ ವಿಡಿಯೊ ಚಿತ್ರೀಕರಿಸಿದಂತೆ ನಟಿ ಮನವಿ ಮಾಡಿಕೊಂಡಿದ್ದೂ ಗಮನ ಸೆಳೆಯಿತು. ಆರೆಂಜ್ ಟಾಪ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಸಾರಾ ಕ್ಯಾಷುವಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗಿಗೆ ಗುಡ್ ಬೈ? ಬಿಟೌನ್‌ನತ್ತ ಸಮಂತಾ ಚಿತ್ತ


ದೇವಸ್ಥಾನದ ಹೊರಗೆ ಕುಳಿತಿದ್ದ ಬಡಜನರ ಯೋಗ ಕ್ಷೇಮವನ್ನು ಸಾರಾ ಅಲಿ ಖಾನ್ ವಿಚಾರಿಸಿದರು. ಆಹಾರದ ಪೊಟ್ಟಣಗಳನ್ನು ಅಲ್ಲಿ ಕುಳಿತಿದ್ದ ಎಲ್ಲರಿಗೂ ಸಾರಾ ವಿತರಿಸಿದರು. ಆದರೆ ಕೆಲವರು ಈ ವಿಡಿಯೊ ಕಂಡು ಪಬ್ಲಿಸಿಟಿ ಗಿಮಿಕ್ ನಟಿಯ ಕಾಲೆಳೆದಿದ್ದಾರೆ.

Share This Article