ಬೋಲ್ಡ್ ಫೋಟೋಗೆ (Bold Photo) ಕೆಟ್ಟ ಕಮೆಂಟ್ ಬಂದ ಬೆನ್ನಲ್ಲೇ ನಟಿ ಸಪ್ತಮಿ ಗೌಡ (Sapthami Gowda) ಈಗ ಗೌರಮ್ಮನಂತೆ ಮೈಮುಚ್ಚಿಕೊಂಡು ಸುಂದರ ಫೋಟೋಶೂಟ್ ಮಾಡಿಸಿದ್ದಾರೆ.
ಇತ್ತೀಚೆಗೆ ಸಪ್ತಮಿ ಗೌಡ ಭಾರಿ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದರು. ಆದರೆ ಸಿನಿಮಾಗಳಲ್ಲಿ ಸಪ್ತಮಿ ಹೆಚ್ಚೆಚ್ಚು ಪಕ್ಕದ್ಮನೆ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಹೀಗಿರುವಾಗ ಸಪ್ತಮಿ ಗೌಡ ಏಕಾಏಕಿ ಬೋಲ್ಡ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಬಿಟ್ಟಿದ್ದರು. ಇದನ್ನೂ ಓದಿ: ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್
View this post on Instagram
ಈ ಫೋಟೋಗಳಿಗೆ ನೆಗೆಟಿವ್ ಕಮೆಂಟ್‌ಗಳು ಬಂದಿತ್ತು. ಆದರೆ ಸಪ್ತಮಿಯನ್ನ ಬೋಲ್ಡ್ ಲುಕ್‌ನಲ್ಲಿ ನೋಡೋಕೆ ಅಭಿಮಾನಿಗಳು ಇಷ್ಟ ಪಡಲಿಲ್ಲ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಪ್ತಮಿ ಗೌಡ ಇದೀಗ ಗೌರಮ್ಮನಂತೆ ಸುಂದರ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು
ಮೈಕಾಣುವಂತೆ ಕ್ರಾಪ್‌ಟಾಪ್ ಧರಿಸಿ ಪೋಸ್ ಕೊಟ್ಟಿದ್ದಕ್ಕೆ ಬ್ಯಾಡ್ ಕಾಮೆಂಟ್ಸ್ ಬಂದಿದ್ದ ಹಿನ್ನೆಲೆ ಇದೀಗ ಸಲ್ವಾರ್ ಧರಿಸಿ ಸರಳ ಲುಕ್‌ನಲ್ಲಿ ಸುಂದರವಾಗಿ ಕಾಣುವಂತೆ ಸಿಂಗರಿಸಿಕೊಂಡಿದ್ದಾರೆ. ಮಿಲ್ಕಿ ವೈಟ್ ಬಣ್ಣದ ಸಲ್ವಾರ್‌ನಲ್ಲಿ ಸಿಂಧೂರವಿಟ್ಟು ಹೂಮುಡಿದು ಅಪ್ಪಟ ಕನ್ನಡತಿಯ ಲುಕ್‌ನಲ್ಲಿ ಮಿಂಚಿದ್ದಾರೆ. ಕಳೆದ ಬಾರಿ ಮಿಸ್ ಆಗಿದ್ದ ಮೆಚ್ಚುಗೆಯ ಕಾಮೆಂಟ್‌ಗಳನ್ನ ಈ ಬಾರಿ ಸಪ್ತಮಿ ಗಿಟ್ಟಿಸಿಕೊಂಡಿದ್ದಾರೆ.