‘ಕಾಂ ತಾರ’ (ಕಾಂತಾರ) ಬೆಡಗಿ ಸಪ್ತಮಿ ಗೌಡ (ಸಪ್ತಮಿ ಗೌಡ) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಸಿನಿಮಾಗೆ ಸಪ್ತಮಿ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ನಟಿ ಕಾಣಿಸಿಕೊಂಡಿರುವ ಲುಕ್ ಈಗ ರಿವೀಲ್ ಆಗಿದೆ. ‘ದಿ ರೈಸ್ ಆಫ್ ಅಶೋಕ’ (ದಿ ರೈಸ್ ಆಫ್ ಅಶೋಕ) ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ಸದಾ ಹೊಸ ಬಗೆಯ ಪಾತ್ರಗಳಿಗೆ ಒತ್ತು ಕೊಡೋ ಸಪ್ತಮಿ ಇದೀಗ ಸತೀಶ್ ನೀನಾಸಂಗೆ (ಸತೀಶ್ ನೀನಾಸಂ) ಜೊತೆಯಾಗಿದ್ದಾರೆ. ‘ದಿ ರೈಸ್ ಆಫ್ ಅಶೋಕ’ ಸಿನಿಮಾಗೆ ನಾಯಕಿಯಾಗಿದ್ದಾರೆ. ಪೋಸ್ಟರ್ ಜೊತೆ ನಿನ್ನ ಪ್ರತಿಯೊಂದು ಹೆಜ್ಜೆಯ ಚಿತ್ರದಲ್ಲೂ ನನ್ನ ಪಾಲಿರಲಿ. ಒಂದು ನಿಂದಾದರೆ, ಮತ್ತೊಂದು ನನ್ನದು ಎಂದು ರೊಮ್ಯಾಂಟಿಕ್ ಆಗಿ ಅಡಿಬರಹ ನೀಡಿದ್ದಾರೆ. ಪೋಸ್ಟರ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಅನ್ನು Instagram ನಲ್ಲಿ ವೀಕ್ಷಿಸಿ
ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಸಪ್ತಮಿ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿದ್ದಾರೆ. ಲಂಗ ದಾವಣಿ ಹಾಕಿಕೊಂಡು ಸೈಕಲ್ ಮೇಲೆ ಕುಳಿತಿದ್ದಾರೆ. ಸೈಕಲ್ ಹಿಂದೆ ಹೂವಿನ ಬುಟ್ಟಿ ಇಡಲಾಗಿದೆ. ಅಂಬಿಕಾ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಹನಿ ಸಿಂಗ್ ಕಾನ್ಸರ್ಟ್‌ನಲ್ಲಿ ರಾಕಿಂಗ್ ಸ್ಟಾರ್- ಕನ್ನಡದಲ್ಲಿ ಹಾಡುವಂತೆ ಯಶ್ ಕಂಡೀಷನ್
ಮೊದಲ ಬಾರಿಗೆ ಸತೀಶ್ ನೀನಾಸಂಗೆ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನಿರ್ದೇಶಕ ವಿನೋದ್ದೊಂಡಾಳೆ ನಿಧನದ ಬಳಿಕ ಈ ಚಿತ್ರವನ್ನು ಮನು ಎಂಬುವವರು ನಿರ್ದೇಶಿಸುತ್ತಿದ್ದಾರೆ. ನಟ ಸತೀಶ್ ನೀನಾಸಂ ನಿರ್ಮಾಣದ ಹೊಣೆ ಹೊತ್ತಿದ್ದಾರೆ.