ಕರ್ನಾಟಕ ಸರಕಾರವು (Government of Karnataka) ಇಂದು ‘ಮೈತ್ರಿ ಮುಟ್ಟಿನ ಕಪ್’ (Maitri MUttina Cup Yojana) ಯೋಜನೆಯನ್ನು ಜಾರಿ ಮಾಡಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಯೋಜನೆಯ ರಾಯಭಾರಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕೂಡ ಭಾಗಿಯಾಗಿದ್ದರು.
Advertisement
ಮೈತ್ರಿ ಮುಟ್ಟಿನ ಕಪ್ ಯೋಜನೆಯ ಕುರಿತಂತೆ ಮಾತನಾಡಿದ ಸಪ್ತಮಿ ಗೌಡ, ಮುಟ್ಟಿನ ಸಂದರ್ಭದಲ್ಲಿ ಆಗುವ ತೊಂದರೆಗಳ ಕುರಿತು ಸಪ್ತಮಿ ಗೌಡ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಈ ಯೋಜನೆಯ ಕುರಿತಂತೆ ಅವರು ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಿದರು. ಮುಟ್ಟಿನ ಕಪ್ ಉಪಯೋಗದ ಬಗ್ಗೆಯೂ ಅವರು ಮಾತನಾಡಿದರು.
Advertisement
Advertisement
ಕಾಂತಾರ ಸಿನಿಮಾದ ಯಶಸ್ಸಿನ ನಂತರ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಸಪ್ತಮಿ ಭಾಗಿಯಾಗಿದ್ದಾರೆ. ಸ್ವತಃ ಅವರು ಕೂಡ ವೈಯಕ್ತಿಕವಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇದೀಗ ಸರಕಾರ ಯೋಜನೆಯಲ್ಲೂ ಅವರು ಭಾಗಿಯಾಗಿ, ಮಹಿಳೆಯರ ಮುಟ್ಟಿನ ಸಮಸ್ಯೆಯ ಕುರಿತಂತೆ ಜಾಗೃತಿಗೆ ಮುಂದಾಗಿದ್ದಾರೆ.
Advertisement
Web Stories