ವೈಟ್‌ ಡ್ರೆಸ್‌ನಲ್ಲಿ ಅಪ್ಸರೆಯಂತೆ ಮಿಂಚಿದ ‘ಕಾಂತಾರ’ ಬ್ಯೂಟಿ

Public TV
1 Min Read
saptami gowda 4

ನ್ನಡದ ನಟಿ ಸಪ್ತಮಿ ಗೌಡ (Saptami Gowda) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಬಿಳಿ ಬಣ್ಣದ ಉಡುಗೆಯಲ್ಲಿ ‘ಕಾಂತಾರ’ (Kantara) ಬ್ಯೂಟಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಪ್ತಮಿ ನಯಾ ಲುಕ್‌ನಲ್ಲಿರೋ ಫೋಟೋಸ್ ಸದಾ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ.

saptami gowda 1

ಕಾಂತಾರ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿರೋ ಮೂಗುತಿ ಸುಂದರಿ ಸಪ್ತಮಿ, ಇತ್ತೀಚೆಗೆ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಅಪ್ಸರೆಯಂತೆ ಸಪ್ತಮಿ ಕಂಗೊಳಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

saptami gowda 2

2023ರ ಸೈಮಾ ಅವಾರ್ಡ್ ಸಮಾರಂಭದಲ್ಲಿ ಬೆಸ್ಟ್ ನಟಿ ಅವಾರ್ಡ್‌ ಸಪ್ತಮಿ ಗೌಡ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ವೈಟ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

saptami gowda 3

‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮೂಲಕ ಇದೀಗ ಬಾಲಿವುಡ್‌ಗೆ (Bollywood) ಲಗ್ಗೆ ಇಡ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ ಕಾಳಿ ಸಿನಿಮಾ, ಯುವ ಚಿತ್ರ, ಉತ್ತರಾಕಾಂಡ ಸೇರಿದಂತೆ ಹಲವು ಸಿನಿಮಾಗಳು ಕಾಂತಾರ ಬ್ಯೂಟಿ ಕೈಯಲ್ಲಿವೆ.

Share This Article