ರಾಯಚೂರು: ಖಾಸಗಿ ಕಾರ್ಯಕ್ರಮಕ್ಕಾಗಿ ರಾಯಚೂರಿಗೆ (Raichuru) ಬಂದಿದ್ದ ನಟಿ ಸಪ್ತಮಿಗೌಡ(Actress Saptami Gowda) ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.
ಸೋಮವಾರ (ಸೆ.22) ರಾಯಚೂರು ನಗರದ ಬಸವೇಶ್ವರ ರಸ್ತೆಯಲ್ಲಿರುವ ಶಾಪಿಂಗ್ ಮಾಲ್ ಉದ್ಘಾಟನೆಗಾಗಿ ನಟಿ ಸಪ್ತಮಿಗೌಡ ಆಗಮಿಸಿದ್ದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ, ನೂಕುನುಗ್ಗಲು ಉಂಟಾಯಿತು.ಇದನ್ನೂ ಓದಿ: ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ
ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಈ ವೇಳೆ ತಮ್ಮ ಸಿನಿಮಾಗಳ ಕುರಿತು ಮಾತನಾಡಿದ ಸಪ್ತಮಿಗೌಡ, ರೈಸ್ ಆಫ್ ಅಶೋಕ ಸಿನಿಮಾ ಶೀಘ್ರದಲ್ಲಿ ಬಿಡಗಡೆಯಾಗಲಿದೆ. ಬೇರೆ ಭಾಷೆಗಿಂತ ಕನ್ನಡ ಸಿನೆಮಾಗಳಲ್ಲೇ ಹೆಚ್ಚು ನಟಿಸುವ ಆಸೆಯಿದೆ ಎಂದು ಹೇಳಿದರು.

