ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ (Sanjjanaa Galrani) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ (Baby Bump) ಫೋಟೋ ಹಂಚಿಕೊಂಡು ತಾಯ್ತನದ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಹಳ್ಳಿ ಹುಡುಗಿ ಗೆಟಪ್‌ನಲ್ಲಿ ‘ಕಿಸ್’ ನಟಿ- ಅಖಿಲ್ ಅಕ್ಕಿನೇನಿಗೆ ಶ್ರೀಲೀಲಾ ಜೋಡಿ
ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ನಟಿ ಮಿಂಚಿದ್ದಾರೆ. ಮಗನೊಂದಿಗೆ ಕುಳಿತು ಕ್ಯಾಮೆರಾಗೆ ಸಂಜನಾ ಪೋಸ್ ನೀಡಿದ್ದಾರೆ. ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ
ತಾಯ್ತನ ಒಂದು ಸುಂದರವಾದ ಪ್ರಯಾಣವಾಗಿದ್ದು, ಹಲವು ಸವಾಲುಗಳೊಂದಿಗೆ ಬೆರೆತು ಹೋಗಿದೆ. 2ನೇ ಬಾರಿ ತಾಯಿ ಆಗೋದು ಅಷ್ಟು ಸುಲಭವಾಗಿರಲಿಲ್ಲ. 35ನೇ ವಯಸ್ಸಿನಲ್ಲಿ ಎದುರಿಸಬೇಕಾದ ಸವಾಲುಗಳು ಬಹಳಷ್ಟಿದ್ದವು ಎಂದು ನಟಿ ಬರೆದುಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದಿದ್ದಾರೆ.
ಇತ್ತೀಚೆಗೆ ಯುಗಾದಿಯಂದು (ಮಾ.30) ತಾವು 2ನೇ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು ಸಂಜನಾ.
ಲಾಕ್‌ಡೌನ್ ಸಮಯದಲ್ಲಿ ವೈದ್ಯ ಅಜೀಜ್ ಪಾಷಾರನ್ನು ನಟಿ ಮದುವೆಯಾದರು. 2022ರಲ್ಲಿ ಚೊಚ್ಚಲ ಮಗುವನ್ನು ಸಂಜನಾ ಬರಮಾಡಿಕೊಂಡರು. ಅವರಿಗೆ ಅಲಾರಿಕ್ ಎಂಬ ಹೆಸರಿನ ಮಗನಿದ್ದಾನೆ. ಸದ್ಯ ಎರಡನೇ ಮಗುವಿನ ಆಗಮನಕ್ಕಾಗಿ ಸಂಜನಾ ದಂಪತಿ ಎದುರು ನೋಡ್ತಿದ್ದಾರೆ.