Connect with us

ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

ಬೆಂಗಳೂರು: ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಕೇಳಿದ್ದಾರೆ.

ಸಂಜನಾ ಹೇಳಿದ್ದೇನು?
ನಾನು ನನ್ನ ಅನುಭವ ಹಾಗೂ ಜೀವನದಲ್ಲಿ ನಡೆದ ಸತ್ಯವನ್ನೇ ಹೇಳಿಕೊಂಡಿದ್ದೇನೆ. ಅಲ್ಲದೇ ಗಂಡ-ಹೆಂಡತಿ ಚಿತ್ರದ ವೇಳ ಆದಂತಹ ಅನುಭವಗಳನ್ನು ಹೇಳಿಕೊಳ್ಳಲು ನನಗೆ ಆಗ ಸಾಧ್ಯವಾಗಿರಲಿಲ್ಲ. ಅಲ್ಲದೇ ನಾನು ಆಹ ಚಿಕ್ಕವಳಿದ್ದೆ. ಈ ಎಲ್ಲಾ ವಿಷಯವನ್ನು ಮೀಟೂ ಅಭಿಯಾನದ ಮೂಲಕ ಹಂಚಿಕೊಂಡಿದ್ದೆ. ಇದರಿಂದಾಗಿ ಚಿತ್ರದ ನಿರ್ದೇಶಕ ಹಾಗೂ ನಿರ್ದೇಶಕರ ಸಂಘದವರಿಗೆ ನೋವುಂಟಾಗಿದೆ.

ನನ್ನ ಉದ್ದೇಶ ಯಾರ ಹೆಸರು ಹಾಗೂ ಜೀವನವನ್ನು ಹಾಳು ಮಾಡಬೇಕೆಂದು ಇರಲಿಲ್ಲ. ಹೀಗಾಗಿ ನಾನು ಕಲಾವಿದರ ಸಂಘದ ಹಿರಿಯರಾದ ನಟ ಅಂಬರೀಶ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು, ಗಂಡ-ಹೆಂಡತಿ ನಿರ್ದೇಶಕರು ಹಾಗೂ ಚಿತ್ರತಂಡ ಮತ್ತು ನಿರ್ದೇಶಕರ ಸಂಘದ ಎಲ್ಲರಿಗೂ ಕ್ಷಮೆಯನ್ನು ಕೋರುತ್ತೇನೆ. ಈ ಘಟನೆಯನ್ನು ಮುಂದುವರಿಸಿಕೊಂಡು ಹೋಗಲು ಇಷ್ಟಪಡುವುದಿಲ್ಲ. ಹೀಗಾಗಿ ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ.

ಸಂಜನಾ ಆರೋಪವೇನು?
ಅಕ್ಟೋಬರ್ 7ರಂದು ಮಾಧ್ಯಮಗಳೊಂದಿಗೆ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಹಿಂಸೆಯ ಬಗ್ಗೆ ತೆರೆದಿಟ್ಟ ಸಂಜನಾ ಗರ್ಲಾನಿ, ನನಗೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು. ಈ ವೇಳೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬ್ಯಾಕಾಂಕ್ ನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಚಿತ್ರನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಆರೋಪ ಮಾಡಿದ್ದರು.

ಸಂಜನಾ ಗರ್ಲಾನಿ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶಕರ ಸಂಘದ ಮೊರೆ ಹೋಗಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರಿಗೆ ಕ್ಷಮೆ ಕೋರುವಂತೆ ಸಂಜಾನಾಗೆ ಆಗ್ರಹಿಸಿದ್ದರು. ಅಲ್ಲದೇ ಈ ಬಗ್ಗೆ ಕಲಾವಿದರ ಸಂಘಕ್ಕೆ ದೂರನ್ನು ಸಹ ಕೊಟ್ಟಿದ್ದರು.

https://www.youtube.com/watch?v=ALJ_vOFTo5Y

https://youtu.be/Fngx4OL8iUY

https://youtu.be/2YYfQAOr3SM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Advertisement
Advertisement