ಬೆಂಗಳೂರು: ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಸಿದ್ದಾರೆ.
ಕಾಂಗ್ರೆಸ್ ಎಂಎಲ್ಎ ಕ್ಷೇತ್ರದಲ್ಲಿರುವ ಯುಬಿ ಸಿಟಿಯಲ್ಲಿ ನಡೆದಿರುವ ಹಲ್ಲೆ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗಬೇಕು. ಎಲ್ಲ ಬಡಜನರಿಗೂ ಹಾಗೂ ಶ್ರೀಮಂತರಿಗೂ ನ್ಯಾಯ ಒಂದೇ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
Advertisement
ಮಹಮ್ಮದ್ ಹ್ಯಾರಿಸ್ ಜೀಗೆ ನನ್ನ ಸಹಾನುಭೂತಿ ಇದೆ. ಮಗ ಮಾಡಿರುವ ತಪ್ಪಿಗೆ ಈ ದಕ್ಷ ನಾಯಕ ಬೆಲೆ ಕಟ್ಟುತ್ತಿದ್ದಾರೆ. ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡುವ ಮೊದಲು ಎಂದರೆ ಈ ಡ್ರಾಮಾ ನಡೆಯುವ ಮೊದಲು ಶಾಂತಿನಗರದ ಶಾಸಕ ಹ್ಯಾರಿಸ್ ಸುಮಾರು 2 ದಶಕಗಳಿಂದ ಪ್ರಾಮಾಣಿಕ ನಾಯಕರಾಗಿದ್ದಾರೆ ಎಂದು ಸಂಜನಾ ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!
Advertisement
ಸಂಜನಾ ಮಾಡಿದ ಈ ಟ್ವೀಟ್ಗೆ ಜನ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.