ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

Public TV
1 Min Read
SANJJANA

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಮುಂದುವರಿದಿದೆ. ಇಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರನ್ನು ಭೇಟಿಯಾದ ಸಂಜನಾ, ಘಟನೆಯ ಬಗ್ಗೆ ವಿವರಣೆ ನೀಡಿದರು. ಅಲ್ಲದೆ ನಿರ್ಮಾಪಕಿ ವಂದನಾ ಜೈನ್ ವಿರುದ್ಧ ಪ್ರತಿ ದೂರು ಕೂಡ ದಾಖಲು ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜನಾ, ನಾನು ವಿಸ್ಕಿ ಬಾಟೆಲ್ ನಿಂದ ಹೊಡೆದಿಲ್ಲ. ಯಾರು ಆ ರೀತಿಯಾಗಿ ನಿಮಗೆ ಹೇಳಿದ್ದು ಎಂದು ಪ್ರಶ್ನಿಸಿದರು. ನನ್ನ ತಾಯಿಯನ್ನ ನಿಂದನೆ ಮಾಡಿದಾಗ ಸುಮ್ಮನಿರಬೇಕಿತ್ತಾ? ಆಕೆಗೆ ಪ್ರಚಾರದ ಹುಚ್ಚು ಹಿಡಿದಿದೆ. ಅವಳೇ ಸುಮ್ಮನೆ ಗಲಾಟೆ ಮಾಡ್ಕೊಂಡು ಬಂದಿದ್ದು. ನಾನು ಐದಾರು ಭಾಷೆಗಳಲ್ಲಿ ನಟಿಸುತ್ತಿದ್ದೇನೆ. ಮುಂದಿನ ವರ್ಷ ಏಳೆಂಟು ಸಿನಿಮಾಗಳು ರಿಲೀಸ್ ಆಗುತ್ತವೆ. ಆಕೆ ನಿರ್ಮಾಪಕಿಯೇ ಅಲ್ಲ, ಯಾವ ಸಿನಿಮಾ ನಿರ್ಮಾಣ ಮಾಡಿದ್ದಾಳೆ ಹೇಳಿ ಎಂದು ಗರಂ ಆದರು.

VANDANA sanjanagalrani

ಆಕೆಯ ಇತಿಹಾಸ ಏನಿದೆ ಗೊತ್ತಾ, ಆಕೆ ಎಂಇಪಿ ಪಕ್ಷದ ನೌಹಿರಾ ಶೇಖ್ ಜೊತೆ ಗುರುತಿಸಿಕೊಂಡಿದ್ದಳು. ಜನರಿಗೆ ಟೋಪಿ ಹಾಕಿದವರ ಜೊತೆ ಇದ್ದಾಳೆ. ನನ್ನನ್ನು ಕೂಡ ಎಂಇಪಿಗೆ ಜಾಯಿನ್ ಆಗುವಂತೆ ಬಲವಂತ ಮಾಡಿದ್ದಳು. ಆದರೆ ನಾನು ಒಪ್ಪಿರಲಿಲ್ಲ ಎಂದು ಸಂಜನಾ ಅವರು ವಂದನಾ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

ಇಷ್ಟು ಮಾತ್ರವಲ್ಲದೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಈಕೆಯಿಂದಲೇ ತಂಡದಿಂದ ಕೈ ಬಿಡುವಂತೆ ಆಯಿತು. ಈಕೆಯೇ ಗಲಾಟೆ ಮಾಡಿ ಕಂಪ್ಲೆಂಟ್ ಕೊಟ್ಟಿದ್ದಾರೆ.. ರಾತ್ರಿ ಎರಡು ಗಂಟೆಯಲ್ಲಿ ಪೊಲೀಸರು ಫೋನ್ ಮಾಡಿ ಕರೆಯುತ್ತಾರೆ. ರಾತ್ರಿಯ ಹೊತ್ತು ಹೆಣ್ಣು ಮಕ್ಕಳನ್ನ ವಿಚಾರಣೆ ಮಾಡಬಹುದಾ..? ನೀನ್ಯಾರಾದರೆ ಏನು ಬರಬೇಕು ಅಂತ ಪೊಲೀಸರು ದಬಾಯಿಸುತ್ತಾರೆ. ಇದೆಲ್ಲವನ್ನೂ ಡಿಸಿಪಿಯವರಿಗೆ ತಿಳಿಸಿದ್ದೀನಿ ಎಂದು ಸಂಜನಾ ಗಲ್ರಾನಿ ತಿಳಿಸಿದರು.

Share This Article