ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ ನಟಿ ಸಂಜನಾ. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಆಡಂ ನನಗೆ ನೇರವಾಗಿ ಪರಿಚಯವೇ ಇಲ್ಲ. ಅವರ ತಂದೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯವರು. ಆದರೆ, ಈ ಹುಡುಗನಿಗೆ ಏನಾಗಿದೆ ಅಂತ ನನಗೆ ಗೊತ್ತಿಲ್ಲ. ರಾತ್ರಿಯೆಲ್ಲ ಅಶ್ಲೀಲ ಮಸೇಜ್ ಕಳಿಸ್ತಾನೆ. ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯಿಸುತ್ತಾನೆ. ಖಾರವಾಗಿ ನಾನು ರಿಯಾಕ್ಟ್ ಮಾಡಿದಾಗ, ನನ್ನ ಮುಗಿಸ್ಬಿಡ್ತೀನಿ ಅಂತ ಹೆದರಿಸುತ್ತಾನೆ’ ಎಂದು ನಟ ಸಂಜನಾ ಆರೋಪಿಸುತ್ತಾರೆ. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ
Advertisement
ಇಂತಹ ಕಿರಿಕಿರಿಯಿಂದಲೇ ಅವರು ಅನೇಕ ಬಾರಿ ಮೊಬೈಲ್ ನಂಬರ್ ಬದಲಾಯಿಸಿದ್ದಾರಂತೆ. ಮತ್ತೆ ಮತ್ತೆ ನಂಬರ್ ಬದಲಾಯಿಸಿದರೆ, ವೃತ್ತಿಗೆ ತೊಂದರೆ ಆಗುವುದರಿಂದ ಇನ್ಮುಂದೆ ಇಂತಹ ಘಟನೆಗಳನ್ನು ಅವರು ಗಂಭೀರವಾಗಿಯೇ ತಗೆದುಕೊಳ್ಳುತ್ತಾರಂತೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!
Advertisement
Advertisement
ಪ್ರಕರಣವನ್ನು ಅಂತ್ಯದವರೆಗೂ ತಗೆದುಕೊಂಡು ಹೋಗುವುದಾಗಿಯೂ ಅವರು ಮಾತನಾಡಿದ್ದಾರೆ. ಏಳು ತಿಂಗಳು ಗರ್ಭಿಣಿಯಾಗಿರುವ ಸಂಜನಾಗೆ ತುಂಬಾ ಮಾನಸಿಕ ಹಿಂಸೆ ಕೊಡುವಂತಹ ಕೆಲಸಗಳು ನಡೆಯುತ್ತಿವೆಯಂತೆ. ಹಾಗಾಗಿ ಪೊಲೀಸ್ ರ ಮೊರೆ ಹೋಗುವುದು ಅನಿವಾರ್ಯ ಅಂದಿದ್ದಾರೆ. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು
Advertisement
ಪ್ರಸಾದ್ ಬಿದ್ದಪ್ಪ ಪುತ್ರ ಆಡಂನನ್ನು ಈಗಾಗಲೇ ಇಂದಿರಾ ನಗರ ಪೊಲೀಸ್ ರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆಗಲೇ ಅವನು ಸಂಜನಾ ಜತೆ ಮಾಡಿದ್ದ ಚಾಟ್ ಗಳನ್ನು ಡಿಲಿಟ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಡಿಲಿಟ್ ಆದ ಚಾಟ್ ಅನ್ನು ಮತ್ತೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರಂತೆ ಪೊಲೀಸ್ ಅಧಿಕಾರಿಗಳು.