ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್?: ಶಾಕ್‌ನಲ್ಲಿ ನಟಿ ಸಂಜನಾ

Public TV
1 Min Read
FotoJet 10

ಒಂದಿಲ್ಲೊಂದು ಕಾರಣದಿಂದಾಗಿ ಸದಾ ಸದ್ದು ಮಾಡುವ ನಟಿ ಸಂಜನಾ, ಈಗ ಮತ್ತೆ ಸುದ್ದಿಗೆ ಆಹಾರವಾಗಿದ್ದಾರೆ. ಈ ಬಾರಿ ಫ್ಯಾಷನ್ ಲೋಕದ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ತಾವೀಗ ಏಳು ತಿಂಗಳ ಗರ್ಭಿಣಿ, ಸಲ್ಲದ ಕಾರಣಕ್ಕಾಗಿ ಸುಖಾಸುಮ್ಮನೆ ನನಗೆ ತೊಂದರೆ ನೀಡಲಾಗುತ್ತಿದೆ ಎಂದಿದ್ದಾರೆ ಸಂಜನಾ. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

sanjana galrani 3

“ನನ್ನ ಜೀವನದಲ್ಲಿ ಈ ಎರಡು ವರ್ಷಗಳು ಅತ್ಯಂತ ನೋವಿನ ವರ್ಷಗಳಾಗಿವೆ. ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದೇನೆ. ನಾನು ಮಾಡದೇ ಇರುವ ತಪ್ಪಿಗೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವಮಾನಿಸಲಾಗುತ್ತಿದೆ. ಪ್ರತಿ ಸಲವೂ ಗಟ್ಟಿಗೊಳ್ಳುತ್ತಾ, ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಾ ಹೋಗುತ್ತಿದ್ದೇನೆ. ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿದೆ. ಎಂತಹ ಸಂದರ್ಭ ಬಂದರೂ ನಾನು ಎದುರಿಸುತ್ತೇನೆ” ಎಂದು ಸುದೀರ್ಘವಾಗಿ ಪತ್ರ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

sanjana galrani 1

ಸದ್ಯ ಸಂಜನಾ ಏಳು ತಿಂಗಳ ಗರ್ಭಿಣಿ. ತಾಯ್ತನವನ್ನು ನೆಮ್ಮದಿಯಿಂದ ಅನುಭವಿಸಬೇಕಾದ ಈ ಸಂದರ್ಭದಲ್ಲಿ ತಮಗೆ ವಿಪರೀತ ತೊಂದರೆ ಆಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಪ್ರಕರಣದಿಂದ ತಾವು ಮಾತ್ರವಲ್ಲ, ತಮ್ಮ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

sanjana galrani 5

ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ ಸಾಕಷ್ಟು ಬಾರಿ ಸಂಜನಾ ಅವರಿಗೆ ಕೆಟ್ಟದ್ದಾಗಿ ಮಸೇಜ್ ಕಳುಹಿಸಿದ್ದಾನಂತೆ. ಚಾರಿತ್ರ್ಯ ಹರಣ ಮಾಡುವಂತಹ ಸಂದೇಶಗಳು ಅವಾಗಿವೆ ಎಂದು ಸಂಜನಾ ಆರೋಪಿಸಿದ್ದಾರೆ ಮತ್ತು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸದ್ಯ ಆಡಂ ಪೊಲೀಸ್ ರ ಅತಿಥಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *