‘ಗಂಡ ಹೆಂಡತಿ’ (Ganda Hendthi) ಖ್ಯಾತಿಯ ನಟಿ ಸಂಜನಾ ಗಲ್ರಾನಿ (Sanjana Galrani) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ನಟನೆಗೆ ಕನ್ನಡದ ನಟಿ ಸಂಜನಾ ಕಂಬ್ಯಾಕ್ ಆಗಿದ್ದಾರೆ. ತಾಯ್ತನದ ನಂತರ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ.
ಸಂಜನಾ ಗಲ್ರಾನಿ ಅವರು ಮದುವೆಯ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ, ಮಗ ಅಲಾರಿಕ್ ಪಾಲನೆಯಲ್ಲಿ ತೊಡಗಿದ್ದರು. ಈಗ ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ನಟಿ ಸಂಜನಾ ರೆಡಿಯಾಗಿದ್ದಾರೆ. ಮಲಯಾಳಂ (Mollywood) ಸಿನಿಮಾ ಮೂಲಕ ಸಂಜನಾ ನಟನೆಗೆ ಮರಳುತ್ತಿದ್ದಾರೆ.
ಮಲಯಾಳಂ ಚಿತ್ರವೊಂದರ ಕಥೆ ಕೇಳಿ ನಟಿಸಲು ಸಂಜನಾ ಓಕೆ ಎಂದಿದ್ದಾರೆ. ಮಾಲಿವುಡ್ ನಟ ಶ್ರೀನಾಥ್ ಬಸಿ (Srinath Bhasi) ನಾಯಕನಾಗಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ (Vijay Kumar) ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಒಂದು ವಾರದಿಂದ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ರಸ್ತೆಗಿಳಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್
11 ತಿಂಗಳ ಮಗು ಅಲಾರಿಕ್ (Alarik) ಜೊತೆ ಸಂಜನಾ ಅವರು ಶೂಟಿಂಗ್‌ಗಾಗಿ ಪ್ರಯಾಣ ಮಾಡಿದ್ದು, ನನ್ನ ತಾಯಿಯ ಬೆಂಬಲದಿಂದಲೇ ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದಾರೆ. ದಂಡುಪಾಳ್ಯ-2 ಬಳಿಕ ಮೋಹನ್ ಲಾಲ್ ನಟನೆಯ ‘ಆರಟ್ಟು’ ಮತ್ತು ‘ಚೋರನ್’ ಸಿನಿಮಾದಲ್ಲಿ ಕಡೆಯದಾಗಿ ಸಂಜನಾ ನಟಿಸಿದ್ದರು. ಇದೀಗ ಮಾಲಿವುಡ್‌ನ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಟನೆಯತ್ತ ಮುಖ ಮಾಡಿದ್ದಾರೆ.