CinemaDistrictsKarnatakaLatestMain PostSandalwood

ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

Advertisements

ಒಂದು ಕಾಲದಲ್ಲಿ ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಶೋಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ ಸಂಜನಾ, ಇದೀಗ ಬಿದ್ದಪ್ಪ ಅವರ ಪುತ್ರ ಆಡಂ ಬಿದಪ್ಪ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಮೊಬೈಲ್ ಗೆ ಆಡಂನಿಂದ ಅಶ್ಲೀಲ, ನಿಂದನಾತ್ಮಕ ಮತ್ತು ಮಾನಸಿಕ ಹಿಂಸೆ ಆಗುವಂತಹ ಮಸೇಜ್ ಗಳು ಬಂದಿವೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಆಡಂ ನನ್ನು ವಶಕ್ಕೆ ಪಡೆದಿರುವ ಇಂದಿರಾ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದಿರುವ ನಟಿ ಸಂಜನಾ, ಮಾಧ್ಯಮಗಳಿಗೆ ಸುದೀರ್ಘ ಎರಡು ಪುಟಗಳಷ್ಟು ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

ನಾನು ಅಗ್ಗದ ಪ್ರಚಾರ ಬಯಸಲಾರೆ. ನನಗೆ ಅದರ ಅಗತ್ಯವೂ ಇಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆಡಂನಿಂದ ತಮಗಾದ ತೊಂದರೆಯನ್ನು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟಿದ್ದು, ಫೆ. 25 ರಂದು ರಾತ್ರಿ 11 ಗಂಟೆಗೆ ಕುಡಿದ ಮತ್ತಿನಲ್ಲಿದ್ದ ಆಡಂ ತಮಗೆ ಅಶ್ಲೀಲ ಮಸೇಜ್ ಗಳನ್ನು ಕಳುಹಿಸುವ ಮೂಲಕ ಮಾನಸಿಕ ದಾಳಿ ಮಾಡಿದ್ದಾನೆ. ಇದರಿಂದ ನಾನು ಮತ್ತು ನನ್ನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಅಸಹ್ಯಕರವಾಗಿದ್ದ ಆ ಮಸೇಜ್ ಗಳಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ನಾನು ಕಾನೂನು ಮೊರೆ ಹೋಗಬೇಕಾಯಿತು. ಏಳು ತಿಂಗಳು ಗರ್ಭಿಣಿ ನಾನು. ಹಾಗಾಗಿ ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ಘಾಸಿ ಮಾಡಬಾರದೆಂದು ವಿಐಪಿ ಮಗನ ವಿರುದ್ಧ ದೂರು ದಾಖಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

ಪದೇ ಪದೇ ಟಾರ್ಗೆಟ್ ಆಗುತ್ತಿದ್ದೇನೆ

ನನ್ನದಲ್ಲದ ತಪ್ಪಿಗೆ ಪದೇ ಪದೇ ನಾನು ಟಾರ್ಗೆಟ್ ಆಗುತ್ತಿದ್ದೇನೆ. ನಾನು ಯಾರ ಜೀವನದಲ್ಲೂ ಪ್ರವೇಶ ಪಡೆಯಲು ಬಯಸುವುದಿಲ್ಲ. ಆದರೆ, ಯಾರಾದರೂ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅಂಥವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನನ್ನ ವಿರುದ್ಧ ಸಲ್ಲದ ಆರೋಪ ಮಾಡುವವರು, ನನ್ನ ಕುಟುಂಬಕ್ಕೆ ತೊಂದರೆ ಕೊಡಲು ಬಂದವರನ್ನು ಸುಮ್ಮನೆ ಬಿಡಲಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

ಸವಾಲಿನ ಎರಡು ವರ್ಷಗಳು

ಕಳೆದ ಒಂದೆರಡು ವರ್ಷಗಳಲ್ಲಿ ನನ್ನ ಜೀವನ ಏನೆಲ್ಲ ಅಡೆತಡೆಗಳನ್ನು ಎದುರಿಸಿದೆ. ಈ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ನೊಂದಿದ್ದೇನೆ. ಕೆಟ್ಟ ದಿನಗಳನ್ನು ಎದುರಿಸಿದ್ದೇನೆ. ನನ್ನ ಅಧ್ಯಾತ್ಮಿಕ ಮನಸ್ಸು ಮತ್ತು ಸಕಾರಾತ್ಮಕ ಭಾವನೆಗಳು ನನಗೆ ಚೈತನ್ಯ ತುಂಬಿವೆ. ಒಂದೊಳ್ಳೆ ದಿನಗಳು ಮತ್ತೆ ನನ್ನ ಬಾಳಲ್ಲಿ ಬರುತ್ತೇವೆ ಎನ್ನುವ ಹೊತ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ಆಡಂ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದಾರೆ ಸಂಜನಾ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

ಕಿರುಕುಳ ಕೊಡುವುದು ಆಡಂ ಚಟ

ಆಡಂ ತಮ್ಮೊಂದಿಗೆ ನಡೆದುಕೊಂಡ ಬಗ್ಗೆ ಅವರ ಪಾಲಕರಿಗೆ ತಿಳಿಸಿದ್ದೆ. ಅವನು ಕುಡಿದ ಮತ್ತಿನಲ್ಲಿದ್ದಾಗ ಹೀಗೆ ಕಿರುಕುಳ ಕೊಡುವುದು ಸಾಮಾನ್ಯ ಅಭ್ಯಾಸ ಆಗಿ ಹೋಗಿದೆ ಎಂದು ಆತನ ತಾಯಿ ತಿಳಿಸಿದರು. ಅವರ ಪಾಲಕರಿಗೆ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ, ಆಡಂ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ.

Leave a Reply

Your email address will not be published.

Back to top button