ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನವಾಗಿದೆ. ಹೊಸ ವರ್ಷದಂದು ದೊಡ್ಮನೆಯಲ್ಲಿ ದೇವಿಗೆ ವಿಶೇಷ ಪೂಜೆ ಕೂಡ ಮಾಡಲಾಗಿದೆ. ಈ ವೇಳೆ, ಮದುವೆಯ ಬಗ್ಗೆ ಸಂಗೀತಾಗೆ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಸಂಗೀತಾಗೆ ಆಗಿರೋ ನಂಬಿಕೆ ದ್ರೋಹದ ಸ್ಫೋಟಕ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡು ಮದುವೆ ಸುಳಿವು ನೀಡಿದ್ರಾ ಅದಿತಿ?
Advertisement
ಮನೆಮಂದಿಯ ಮುಂದಿನ ಭವಿಷ್ಯದ ಬಗ್ಗೆ ಗುರೂಜಿ ಗುರುವಚನ ಹೇಳಿದ್ದಾರೆ. ಮೊದಲಿಗೆ ಸಂಗೀತಾ ಬಂದಿದ್ದು, ನನ್ನ ಪೂರ್ತಿ ಹೆಸರು ಸಂಗೀತಾ ಶೃಂಗೇರಿ (Sangeetha Sringeri) ಅಂತ ಇಂಡಸ್ಟ್ರಿಗೆ ಕೊಟ್ಟಿದ್ದೀನಿ. ಹುಟ್ಟು ಹೆಸರು – ಶ್ರೀದೇವಿ ಅಂತ ನನ್ನ ಜಾತಕದಲ್ಲಿ ಬರೆದಿದೆ ಎಂದು ಸಂಗೀತಾ ಹೇಳಿದರು. ಆಗ, ಎಲ್ಲರದರಲ್ಲೂ ಮೊದಲು ಬೇಕು ಅಂತ ಕೇಳ್ತೀರಾ. ಮನಸ್ಸಿನಲ್ಲಿ ತುಂಬಾ ಹಿಂಸೆ ಇದೆ. ಮೊದಲಿನಿಂದಲೂ ಅಷ್ಟೇ ಎಂದಿದ್ದಾರೆ. ಏನೋ ಒಂದು ರೀತಿಯ ಉದ್ವೇಗವಿದೆ. ಏನೋ ಒಂದು ಭಯ. ಏನೋ ಒಂದು ರೀತಿ ಮನಸ್ಸಿಗೆ ಸಂಬಂಧಪಟ್ಟ ವ್ಯಾಕುಲತೆ. ತುಂಬಾ ನಂಬಿದ್ರಿ. ಅದ್ಯಾಕೋ ಕೈ ಹಿಡಿಯಲಿಲ್ಲ ಅಂತ ಗುರೂಜಿ ಹೇಳಿದರು.
Advertisement
Advertisement
ಆ ನಂಬಿಕೆ ದ್ರೋಹದಿಂದಲೇ ನಿಮ್ಮ ಜೀವನದಲ್ಲಿ ಬಹಳ ಬೇಸರ ಬಂದಿರಬೇಕಲ್ವಾ? ಎಲ್ಲರ ಬದುಕಿನಲ್ಲೂ ಕೊರೆಗಳು ಬಂದಿರುತ್ತೆ. ಮುಂದಕ್ಕೆ ಹೋಗಬೇಕು. ಆ ಕೊರೆಯನ್ನ ನೀಗಿಸುವಂತಹ ಇನ್ನೊಬ್ಬರ ಪ್ರವೇಶವಾಗುತ್ತದೆ. ಅಲ್ಲಿಂದ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಮದುವೆ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ವೃತ್ತಿಜೀವನ ಮೇಲೂ ಹೋಗುತ್ತೆ. ಕೆಳಗೂ ಬರುತ್ತೆ. 2024ರಲ್ಲಿ ನಿಮ್ಮ ಕೆರಿಯರ್ ಹಾಗೂ ಪರ್ಸನಲ್ ಲೈಫ್ ತುಂಬಾ ಚೆನ್ನಾಗಿ ಹೋಗುತ್ತೆ ಎಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದರು.
Advertisement
ಮದುವೆ (Wedding) ಆಗಬೇಕಾ ಎಂದು ಗುರೂಜಿ ಕೇಳಿದಾಗ, ಇಲ್ಲ ಎಂದರು ಸಂಗೀತಾ. ನಾನು ಖಂಡಿತವಾಗಿ ಹೇಳ್ತೀನಿ. 2025ರ ನಂತರ ಮದುವೆ ಆಗುತ್ತೆ ಅಂತ ಗುರೂಜಿ ಹೇಳಿದಾಗ, ನನಗೆ ಮದುವೆ ಆಗೋಕೆ ಇಷ್ಟ ಇಲ್ಲ ಎಂದರು ಸಂಗೀತಾ. ಈ ವೇಳೆ, ಒಂದು ಸಣ್ಣ ಬಿಸಿಗಾಯದಿಂದ ನಮ್ಮ ಜೀವನದಲ್ಲಿ ಬೆಂಕಿಯೇ ಬೇಡ ಅನ್ನಬಾರದು. ಬದುಕಿನಲ್ಲಿ ಮದುವೆ ನಂತರ ತುಂಬಾ ಚೆನ್ನಾಗಿರುತ್ತೀರಾ. ಅದರ ಬಗ್ಗೆ ಆಲೋಚನೆ ಮಾಡು. ಬೇಡ ಅಂದಿದ್ದು ನಮ್ಮ ಬದುಕಿನಲ್ಲಿ ಬರ್ತಾನೇ ಇರುತ್ತೆ. ಯಾವುದು ಬೇಡ ಅಂತ ಸಂಗೀತಾ ಓಡುತ್ತಿದ್ಲೋ. ಅದೇ ಬಂದಿರೋದು ಎಂದರು ಗುರೂಜಿ. ಆಗ, ಹೌದು.. ಬಿಗ್ ಬಾಸ್ ಕೂಡ ಅಂತ ಸಂಗೀತಾ ಪ್ರತಿಯುತ್ತರ ನೀಡಿದ್ದಾರೆ. ಅಮ್ಮನವರ ಆಶೀರ್ವಾದ, ಕೃಪೆ ಇರುತ್ತೆ. ಚೆನ್ನಾಗಿ ಇರ್ತೀಯಾ ಎಂದು ಸಂಗೀತಾಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಶೀರ್ವಾದ ಮಾಡಿದರು.
ಇದರಲ್ಲಿ ಗೆಲುವು ಸಿಗುತ್ತಾ? ಎಂದು ಸಂಗೀತಾ (Sangeetha) ಪ್ರಶ್ನಿಸಿದರು. ಅದಕ್ಕೆ, ಖಂಡಿತ. ಯಾರಿಗೆ ಅರ್ಹತೆ ಇರುತ್ತೋ, ಅವರಿಗೆ ಜಯ ಸಿಕ್ಕೇ ಸಿಗುತ್ತೆ. ಅರ್ಹತೆ ನಿಮಗೆ ಇದ್ದರೆ, ಖಂಡಿತ ಅಮ್ಮನವರ ಆಶೀರ್ವಾದ ಇರಲಿ. ಇಲ್ಲಿ ಎಲ್ಲರೂ ಗೆಲ್ಲೋದಕ್ಕೆ ಇರೋದು ಅಲ್ವಾ? ಎಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಮಾತನಾಡಿದ್ದರು.