ಕೆಲವು ವರ್ಷಗಳ ಹಿಂದೆ ಸುದ್ದಿಯಾಗಿದ್ದ ಮೀಟೂ (Me Too) ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಹಲವು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಕೇರಳದ ಹೇಮಾ ಸಮಿತಿ ವರದಿ. ಮಾಲಿವುಡ್‌ನಲ್ಲಿ ನಟಿಯರಿಗೆ ಸಮಿತಿ ರಚನೆ ಆದಂತೆ ಸ್ಯಾಂಡಲ್‌ವುಡ್‌ನಲ್ಲೂ ಆಗಬೇಕು ಎಂದು ಕನ್ನಡದ ನಟಿಯರು ಮನವಿ ಮಾಡಿರುವ ಕುರಿತು ನಟಿ ಸಂಗೀತಾ ಭಟ್ (Actress Sangeetha Bhat) ಮಾತನಾಡಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ
ಹೇಮಾ ಕಮಿಟಿ ರಿಪೋರ್ಟ್ ಮಾಲಿವುಡ್‌ನಲ್ಲಿ ಹೊರಗೆ ಬಂತು ಅದಕ್ಕಾಗಿ ಸ್ಯಾಂಡಲ್‌ವುಡ್‌ನಲ್ಲೂ ಈ ರೀತಿ ಮಾಡಲು ಮುಂದಾಗಿರೋದು ಅಲ್ಲ. ಹಲವಾರು ವರ್ಷಗಳ ಹಿಂದೆ ಮೀಟೂ ವಿಷಯದಲ್ಲಿ ತಮಗಾದ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದರು. ಆಗಲೇನೇ ಫೈರ್ ಸಂಸ್ಥೆ ನಟಿಯರ ಸೆಫ್ಟಿ ಪರವಾಗಿ ಕೆಲಸ ಮಾಡುತ್ತಿದ್ದರು. ಮಲಯಾಳಂ ಚಿತ್ರರಂಗದ ನಂತರ ಕನ್ನಡ ಸಿನಿಮಾರಂಗದಲ್ಲೂ ಮಹಿಳೆಯರಾಗಲಿ, ಪುರುಷರಾಗಲಿ ಅವರ ರಕ್ಷಣೆಗೋಸ್ಕರ ಫೈರ್ ಸಂಸ್ಥೆಯ ಕೆಲಸ ಮಾಡಲಿದೆ ಎಂದು ಸಂಗೀತಾ ಭಟ್ ಮಾತನಾಡಿದ್ದಾರೆ.
Advertisement
Advertisement
ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರಷ್ಟೇ ಅಲ್ಲದೇ ಪುರುಷರೂ ದೌರ್ಜನ್ಯಕ್ಕೆ ಒಳಗಾಗಬಹುದು. ಸಿನಿಮಾ ಕ್ಷೇತ್ರ ಕಾರ್ಪೊರೇಟ್ ಸ್ಟೈಲಿನಲ್ಲಿ ನಡೆಯಲ್ಲ. ಇಲ್ಲಿ ಬೇರೆ ಕಡೆಗಳಂತೆ ಕೆಲಸ ಮಾಡುವ ಸ್ಥಳದಲ್ಲಿ ಸಮಾನತೆಗೆ ಒಂದು ಸಮಿತಿ ಬೇಕು ಎನ್ನುವುದು ಉದ್ದೇಶ. ರಕ್ಷಣೆ ಮತ್ತು ಹಕ್ಕುಗಳ ಪಾಲನೆಯ ಜೊತೆ ಸಮಾನತೆಯೇ ಇದರ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
Advertisement
Advertisement
ಈ ಹಿಂದೆ ಮೀಟೂ ವಿಚಾರ ಭುಗಿಲೆದ್ದಾಗ ಸಮಿತಿ ರಚನೆಯಾಗಬೇಕಿತ್ತು. ಆದರೆ ಆ ವೇಳೆ ಜಾಗೃತಿ ಮೂಡಿದ್ದು ನಿಜ. ಇದೀಗ ಮತ್ತೆ ಸಮಿತಿ ರಚನೆಯ ಒತ್ತಾಯಕ್ಕೆ ನಾನೂ ಸಹಿ ಮಾಡಿದ್ದೇನೆ. ಇದರ ಬಗ್ಗೆ ತುಂಬಾ ಹೆಮ್ಮೆ ಇದೆ. ಈಗಲಾದ್ರೂ ಜಾರಿಗೆ ಒತ್ತಾಯ ಆಯ್ತಲ್ಲ ಅಂತ. ಇನ್ಮುಂದೆ ಮಹಿಳೆಯರ ಮೇಲಾಗುವ ದೌರ್ಜನ್ಯ, ಹಿಂಸೆ, ಮತ್ತು ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಎಂದು ನಟಿ ಹೇಳಿದ್ದಾರೆ.