ಬೈಕಿನಲ್ಲಿ ಹೋಗ್ತಿದ್ದಾಗಲೇ ಸಂಯುಕ್ತಾ ಹೆಗ್ಡೆ ಲಿಪ್ ಲಾಕ್

Public TV
1 Min Read
samyuktha hegde collage

ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಅವರು ಲಿಪ್‍ಲಾಕ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಂಯುಕ್ತಾ ತಮಿಳಿನಲ್ಲಿ ನಟಿಸಿರುವ ‘ಪಪ್ಪಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಟ್ರೈಲರ್ ನಲ್ಲಿ ಸಂಯುಕ್ತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಲಿಪ್‍ಲಾಕ್ ದೃಶ್ಯಗಳಲ್ಲಿ ಅಭಿನಯಿಸಿದ್ದು, ಜೊತೆಗೆ ಕೆಲವು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಪ್ಪಿ ಚಿತ್ರದಲ್ಲಿ ಸಂಯುಕ್ತಾ, ಹೀರೋ ವರುಣ್ ಜೊತೆ ಬೈಕಿನಲ್ಲಿ ಹೋಗುವಾಗ ಲಿಪ್‍ಲಾಕ್ ಮಾಡುವ ದೃಶ್ಯಗಳು ವೈರಲ್ ಆಗಿವೆ.

samyuktha hegde 1

ಮೊರಟ್ಟು ಸಿಂಗಲ್ `ಪಪ್ಪಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಯುಕ್ತಾ ಇದೀಗ ತಮಿಳಿನಲ್ಲಿ ಲಿಪ್‍ಲಾಕ್ ಮಾಡಿದ್ದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಈ ಹಿಂದೆ ಕನ್ನಡದ `ಮೈ ನೇಮ್ ಈಸ್ ರಾಜ್’ ಸಿನಿಮಾದಲ್ಲಿ ಸಂಯುಕ್ತಾ ಅಭಿನಯಿಸಬೇಕಿತ್ತು. ಆದರೆ ಚಿತ್ರದಲ್ಲಿ ಲಿಪ್‍ಲಾಕ್ ದೃಶ್ಯಗಳು ಇವೆ ಎಂದು ಚಿತ್ರವನ್ನು ರಿಜೆಕ್ಟ್ ಮಾಡಿದ್ದರು ಎಂದು ಚಿತ್ರತಂಡ ತಿಳಿಸಿತ್ತು.

samyuktha hegde

ಸಂಯುಕ್ತಾ ಈ ಹಿಂದೆ ತಮಿಳಿನ ‘ಕೋಮಲಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ಈ ಸಿನಿಮಾ ಬಿಡುಗಡೆಯಾಗಿದ್ದು, ಸಂಯುಕ್ತಾ ಶಾಲಾ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಂಯುಕ್ತಾ ಸಾಮಾಜಿಕ ಜಾಲತಾಣದಲ್ಲೂ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಆದರೆ ಈಗ ಬೈಕ್ ಮೇಲೆ ಲಿಪ್‍ಲಾಕ್ ಮಾಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ.

Share This Article