ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಸದ್ದು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಬ್ಯಾಂಕಾಕ್‍ನಲ್ಲಿ ಗೆಳೆಯನ ಜೊತೆಗೆ ಬಿಕಿನಿ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಬಿಕಿನಿ ಫೋಟೋ ಹಾಕಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ.
ನಟಿ ಸಂಯುಕ್ತಾ ಹೆಗ್ಡೆ ಕಳೆದ ಕೆಲವು ದಿನಗಳಿಂದ ಬ್ಯಾಂಕಾಕ್ ರಸ್ತೆ, ಬೀಚ್‍ನಲ್ಲಿ ನಿಂತು ಹಾಟ್ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಅವುಗಳನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈಗ ಹೊಸದಾಗಿ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತಿರುವ ಫೋಟೋ ಹಾಗೂ ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Advertisement
https://www.instagram.com/p/BrUM-bNFNMY/
Advertisement
ಸಂಯುಕ್ತಾ ಫೋಟೋ ಜೊತೆಗೆ, “ಜನರ ಅಭಿಪ್ರಾಯವನ್ನು ಬದಲಾಯಿಸಲು ಹೋಗಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿ. ಅದನ್ನು ಬೇರೆಯವರು ಇಷ್ಟಪಡುತ್ತಾರೋ ಇಲ್ಲವಾ ಎನ್ನುವುದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನಿಮಗಾಗಿ ನೀವು ಬದುಕಿ” ಎಂದು ಬರೆದುಕೊಂಡಿದ್ದಾರೆ. ಸಂಯುಕ್ತಾ ಹೆಗ್ಡೆ ತನ್ನ ಬಿಕಿನಿ ಫೋಟೋ ಪೋಸ್ಟ್ ಮಾಡುತ್ತಿದ್ದಂತೆಯೇ ಪರ ವಿರೊಧ ಕಮೆಂಟ್ ಗಳು ಬರುತ್ತಿವೆ.
Advertisement
ಈ ಹಿಂದೆ ಇದು ಬ್ಯಾಂಕಾಕ್ ಪ್ರವಾಸದ ಮೊದಲನೇ ದಿನ. ಪ್ರವಾಸದಲ್ಲಿನ ಸಂತೋಷ (ಹ್ಯಾಪಿನೆಸ್ ಇನ್ ಟ್ರಾವೆಲಿಂಗ್) ಎಂದು ಬರೆದು ಬ್ಯಾಂಕಾಕ್ ಪ್ರವಾಸದ ಮೊದಲ ಫೋಟೋ ಹಂಚಿಕೊಂಡಿದ್ದರು. ಮಾರನೇ ದಿನ ಸಮುದ್ರದ ಉಪ್ಪು ನೀರಿನಿಂದಾಗಿ ಸೌಂದರ್ಯ ಹಾಳಾಗಿದ್ದಕ್ಕೆ `ಇಟ್ಸ್ ಎಫೆಕ್ಟ್ ಆಫ್ ಬೀಚ್’ ಅಂತಾ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಯುವಕನೊಂದಿಗೆ ಬೋಟ್‍ನಲ್ಲಿ ಕುಳಿತಿರುವ ಫೋಟೋ ಕೂಡ್ ಅಪ್ಲೋಡ್ ಮಾಡಿದ್ದರು.
Advertisement
https://www.instagram.com/p/BrXC1hqF3Iw/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv