ಬೆಂಗಳೂರು: ವರ್ಷದಿಂದ ವರ್ಷಕ್ಕೆ ಹೊಸತನ್ನು ತರೋ ಹಬ್ಬ ಸಂಕ್ರಾಂತಿ. ಹಳ್ಳಿ ಇರಲಿ,ದಿಲ್ಲಿ ಇರಲಿ, ಎಲ್ಲೆಡೆ ಸುಗ್ಗಿಹಬ್ಬದ ಸಂಭ್ರಮ ಕಳೆಗಟ್ಟಿದೆ. ಸಿಲಿಕಾನ್ ಸಿಟಿಯ ಮಕ್ಕಳಿಗೆ ಭಾರತೀಯ ಸಂಸ್ಕ್ರತಿ , ಹಬ್ಬಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ಜೋರಾಗಿವೆ. ಈ ನಿಟ್ಟಿನಲ್ಲಿ ನಗರದ ನಾಗಶೆಟ್ಟಿ ಹಳ್ಳಿಯ ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಹಳ್ಳಿ ಸೊಗಡಿನ ರೈತರ ಹಬ್ಬವನ್ನು ಆಚರಿಸಲಾಯಿತು.
ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಿತ್ರ ನಟಿ ಹಾಗೂ ಮಾಡೆಲ್ ಸಂಹಿತ ವಿನ್ಯಾ ಚಾಲನೆ ನೀಡಿದರು. ಗೋ ಪೂಜೆ, ರಾಶಿ ಪೂಜೆ ಮಾಡಿ, ಬಣ್ಣ ಬಣ್ಣದ ಗಡಿಗೆಗಳಲ್ಲಿ, ಸೌದೆ ಒಲೆ ಹಚ್ಚಿ ಪೊಂಗಲ್ ತಯಾರಿಸಿದ್ರು.
ಇನ್ನು ಸೇಂಟ್ ಜೋಸೆಫ್ ಶಾಲೆಯಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿತ್ತು. ಪುಟಾಣಿಗಳು ತಯಾರಿಸಿದ ಗಾಳಿಪಟಗಳು ಆಗಸದಲ್ಲಿ ಚಿತ್ತಾರ ಬರೆದವು. ಮಕ್ಕಳ ಸಂಭ್ರಮವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv