ಸೌತ್ ಬ್ಯೂಟಿ ಸಮಂತಾ (Samantha) ಸದ್ಯ ಬಾಲಿವುಡ್ ಪ್ರಾಜೆಕ್ಟ್ ‘ಸಿಟಾಡೆಲ್ ಹನಿ ಬನಿ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದಲ್ಲಿನ ಏರಿಳಿತಗಳನ್ನು ಹೇಗೆ ಎದುರಿಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಸಮಂತಾ ಮಾತನಾಡಿದ್ದಾರೆ.
ನಾನು ಸೋಲನ್ನು ಒಪ್ಪಿಕೊಳ್ತೀನಿ. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ನಾನು ಮತ್ತೆ ಗಟ್ಟಿಯಾಗಿ ಹಿಂತಿರುಗುತ್ತೇನೆ ಎಂದು ಮಾತನಾಡಿದ್ದಾರೆ ಸಮಂತಾ. ಇದನ್ನೂ ಓದಿ:‘ಟೆನೆಂಟ್’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್-ತಿಲಕ್ ಗೆ ಜೊತೆಯಾದ ಸೋನು ಗೌಡ
ನಾನು ಈ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕಿತ್ತು. ಅದೇನೆಂದರೆ, ನಾನು ಗೌರವಿಸುವ ವ್ಯಕ್ತಿಯಿಂದ ಅದ್ಭುತವಾದ ಮಾತುಗಳನ್ನು ಕೇಳಿದ್ದೇನೆ. ನಿಮಗೆ ತೊಂದರೆಯಾಗುವುದರಲ್ಲಿ ನಿಮ್ಮ ಭವಿಷ್ಯ ಕಂಡುಕೊಳ್ಳುತ್ತೀರಿ. ಯಾವುದೇ ಸಮಸ್ಯೆ ಎದುರಾದರೂ ನಮಗೆ ಮುಂದಿನ ದಾರಿ ತಿಳಿಯುತ್ತದೆ ಎಂದು ಹೇಳಿದರು. ಏನೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ ಎಂಬರ್ಥದಲ್ಲಿ ನಟಿ ಮಾತನಾಡಿದ್ದಾರೆ.
ಅಂದಹಾಗೆ, ವರುಣ್ ಧವನ್ (Varun Dhawan) ಜೊತೆಗಿನ ‘ಸಿಟಾಡೆಲ್’ ವೆಬ್ ಸರಣಿ ಇದೇ ನವೆಂಬರ್ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದು ಸಮಂತಾ ನಟನೆಯ ಬಾಲಿವುಡ್‌ನ 2ನೇ ವೆಬ್ ಸಿರೀಸ್ ಆಗಿದೆ. ಮತ್ತೆ ಗೆಲ್ತಾರಾ ಸಮಂತಾ ಕಾದುನೋಡಬೇಕಿದೆ.