CinemaLatestMain PostSouth cinema

ಸಮಂತಾ ಜೊತೆ ಸ್ಟೈಲಿಸ್ಟ್ ಪ್ರೀತಂ ಸಂಬಂಧ ವದಂತಿ

ಹೈದರಾಬಾದ್: ಟಾಲಿವುಡ್‍ ನಟ ನಾಗಚೈತನ್ಯ, ಸಮಂತಾ ವೈವಾಹಿಕ ಸಂಬಂಧ ಮುರಿದು ಬಿದ್ದು ಹಲವು ದಿನಗಳಾಗಿವೆ. ಆದರೆ ಈ ಜೋಡಿ ಬೇರೆಯಾಗುತ್ತಿದ್ದಂತೆ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಇನ್ನೊಂದು ವಿಚಾರ ಸೆರ್ಪಡೆಯಾಗಿದೆ.

ವಿಚ್ಛೇದನ ಪಡೆದುಕೊಳ್ಳುತ್ತಿದ್ದಂತೆ ಟೀಕೆಗಳು ಕೇಳಿ ಬಂದಿದ್ದವು. ಆದರೆ ಇದೀಗ ಈ ಜೋಡಿ ಸಂಬಂಧ ಮುರಿದು ಬೀಳಲು ಸಮಂತಾರ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಎಂಬ ವದಂತಿ ಹಬ್ಬಿದ್ದು, ಅದರ ಬೆನ್ನಲ್ಲೆ ಪ್ರೀತಂಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಕರೆಗಳು ಬರ ತೊಡಗಿವೆಯಂತೆ.

ನಾಗಚೈತನ್ಯ ಅವರ ಅಭಿಮಾನಿಗಳು ಕೊಲೆ ಬೆದರಿಕೆ ಹಾಕುತ್ತಿದ್ದು, ಅವಹೇಳನ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ತಮ್ಮ ಅಭಿಮಾನಿಗಳಿಗೆ ಈ ರೀತಿ ಮಾಡಬೇಡಿ ಎಂದು ನಾಗಚೈತನ್ಯ ಅವರು ಸೂಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

ಸಮಂತಾ ತನ್ನ ಸಹೋದರಿಯಂತೆ ಮತ್ತು ಅವಳನ್ನು ಜಿಜಿ ಎಂದು ಕರೆಯುತ್ತೇನೆ. ಜಿಜಿ ಎಂದರೆ ಉತ್ತರ ಭಾರತದಲ್ಲಿ ಸಹೋದರಿ ಎಂಬ ಅರ್ಥವಾಗಿದೆ. ನಮ್ಮ ನಡುವೆ ಸಂಪರ್ಕವಿರಬಹುದು. ಆದರೆ ಅವರು ನನ್ನ ಸಹೋದರಿಯಂತೆ ಎಂದು ಸಂದರ್ಶನವೊಂದರಲ್ಲಿ ಸಮಂತಾರ ಸ್ಟೈಲಿಸ್ಟ್ ಪ್ರೀತಂ ಹೇಳಿದ್ದಾರೆ. ಇದನ್ನೂ ಓದಿ:  ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದ್ರೆ, ಅದು ನಂಗೆ ಅಂದ್ರೆ ಜವಾಬ್ದಾರ ನಾನಲ್ಲ: ಸಿದ್ದಾರ್ಥ್

ಜುಕಾಲ್ಕರ್ ಸ್ಟೈಲಿಸ್ಟ್ ಅಷ್ಟೇ ಅಲ್ಲದೆ ಸಮಂತಾಗೆ ಆತ್ಮೀಯ ಗೆಳಯನು ಆಗಿದ್ದಾನೆ. ಅವರಿಬ್ಬರ ಫೋಟೋಗಳಿಂದಾಗಿ ಈ ಇಬ್ಬರ ಮಧ್ಯೆ ಸಂಬಂಧವಿದೆ ಎನ್ನುವ ವಂದಂತಿ ಹಬ್ಬಿತ್ತು. ಈ ವಿಚಾರವಾಗಿ ಸಮಂತಾ ಸ್ಟೈಲಿಸ್ಟ್ ಪ್ರೀತಂ ತೆರೆ ಎಳೆದಿದ್ದಾರೆ.

Leave a Reply

Your email address will not be published.

Back to top button