ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಮಹಿಳೆಯ ಲೈಂಗಿಕತೆಯ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.
ಲೈಂಗಿಕತೆಯ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳುವ ಬದಲು ಮಹಿಳೆಯರನ್ನು ನಿಯಂತ್ರಿಸದಂತೆ ಮಗನಿಗೆ ಕಲಿಸಿಕೊಡಿ. ಏಕೆಂದರೆ ನಿಮ್ಮ ಮಗಳಿಗೆ ಲೈಂಗಿಕತೆಯ ಹಕ್ಕನ್ನು ನಿರಾಕರಿಸುವುದು, ಅವಳನ್ನು ವಸ್ತುವನ್ನಾಗಿಸುವ ಇನ್ನೊಂದು ಮಾರ್ಗವಾಗಿದೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಸಮಂತಾ ತಿಳಿಸಿದ್ದಾರೆ.
ಸಮಂತಾ ಪುಷ್ಪ ಸಿನಿಮಾದಲ್ಲಿ ಊ..ಅಂಟಾವಾ.. ಐಟಂ ಮಾದಕವಾಗಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಅವರ ಮಾದಕ ನೃತ್ಯವನ್ನು ಹಲವರು ಮೆಚ್ಚುಗೆ, ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಟ್ರೋಲ್ಗೆ ಒಳಗಾಗಿದ್ದರು.
ಸಮಂತಾ ಅವರು ಇತ್ತೀಚೆಗೆ ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.