ತೆಲುಗಿನ ನಟಿ ಸಮಂತಾ (Samantha) ಈಗೀಗ ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರಾಜ್ ನಿಡಿಮೋರು ಜೊತೆಗಿನ ಡೇಟಿಂಗ್ ವಿಚಾರದ ನಡುವೆ ಮಾಜಿ ಪತಿ ನಾಗಚೈತನ್ಯ (Nagachaitanya) ಮದುವೆ (Wedding) ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಮಂತಾಗೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಮಾಜಿ ಪತಿಯ ಹೊಸ ಜೀವನದ ಬಗ್ಗೆ ನಿಮಗೆ ಅಸೂಯೆ ಇದೆಯೇ? ಎಂದು ಕೇಳಲಾಗಿದೆ. ಈ ಕುರಿತು ಮಾತನಾಡಿದ ನಟಿ, ಅಸೂಯೆಗೆ ನನ್ನ ಜೀವನದಲ್ಲಿ ಜಾಗವಿಲ್ಲ. ಅದು ನನ್ನ ಜೀವನದ ಭಾಗವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕೆಟ್ಟ ವಿಷಯಗಳಿಗೆ ಅಸೂಯೆಯೇ ಕಾರಣ ಎಂದು ನಾನು ನಂಬುತ್ತೇನೆ.
ಅಸೂಯೆ ಎಲ್ಲ ಕೆಟ್ಟದ್ದಕ್ಕೂ ಮೂಲ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. ಆದರೆ, ಅಸೂಯೆಗಿಂತ ಅನಾರೋಗ್ಯಕರ ವಿಚಾರಗಳಿಗೆ ಸ್ಥಳವಿಲ್ಲ ಎಂದಿದ್ದಾರೆ ಸಮಂತಾ.
ಇನ್ನೂ ಕೆಲ ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದರು. ಆದರೆ ಕೆಲ ಮನಸ್ತಾಪಗಳಿಂದ ಅವರು 2021ರಲ್ಲಿ ಡಿವೋರ್ಸ್ ಘೋಷಿಸಿದರು. ಇದೀಗ ಕಳೆದ ವರ್ಷ ಡಿ.4ರಂದು ಶೋಭಿತಾ ಜೊತೆ ನಾಗಚೈತನ್ಯ ಮದುವೆಯಾದರು.