ನಟಿ ಸಮಂತಾ ‘ಶಾಕುಂತಲಂ’ ಸಿನಿಮಾ ಸೋಲಿನ ಬೆನ್ನಲ್ಲೇ ಲಂಡನ್‌ಗೆ ಹಾರಿದ್ದಾರೆ. ವರುಣ್ ಧವನ್ (Varun Dhawan) ಜೊತೆ ಹಾಲಿವುಡ್ ‘ಸಿಟಾಡೆಲ್’ (Citadel) ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ. ‘ಶಾಕುಂತಲಂʼ ಸಿನಿಮಾ ಕಲೆಕ್ಷನ್ ಶಾಕ್ ಕೊಟ್ಟಿರುವ ಬೆನ್ನಲ್ಲೇ ಬಾಲಿವುಡ್ ಸಿನಿಮಾದತ್ತ ನಟಿ ಮುಖ ಮಾಡಿದ್ದಾರೆ. ಇದನ್ನೂ ಓದಿ:‘ಸೂತ್ರಧಾರಿ’ಗೆ ಡಬ್ಬಿಂಗ್ ಶುರು ಮಾಡಿದ ಚಂದನ್ ಶೆಟ್ಟಿ
ಇತ್ತೀಚಿಗೆ ಸಮಂತಾ (Samantha) ಅವರು ಏಕಾಏಕಿ ಲಂಡನ್‌ಗೆ ಹಾರಿದ್ದರು ಏಪ್ರಿಲ್ 18ರ ರಾತ್ರಿ ಪ್ರೀಮಿಯರ್ ಮಾಡಲಾಗಿದೆ. ಪ್ರಿಯಾಂಕಾ ಚೋಪ್ರಾ, ರಾಜ್ ನಿಧಿಮೋರು, ಕೃಷ್ಣ ಡಿ.ಕೆ. ಮುಂತಾದವರು ಕೂಡ ಇದರಲ್ಲಿ ಭಾಗಿ ಆಗಿದ್ದರು. ‘ಸಿಟಾಡೆಲ್’ ಪ್ರೀಮಿಯರ್ ಶೋ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
‘ಸಿಟಾಡೆಲ್’ ವೆಬ್ ಸೀರಿಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬ್ಯಾಕ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟೀಸರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಹಾಗಾದರೆ ಭಾರತೀಯ ವರ್ಷನ್‌ನಲ್ಲಿ ಸಮಂತಾ ಕೂಡ ಇದೇ ರೀತಿ ನಟಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಬೋಲ್ಡ್ ಪಾತ್ರಗಳನ್ನು ಮಾಡುವಲ್ಲಿ ಸಮಂತಾ ಅವರು ಹಿಂದೇಟು ಹಾಕುವವರಲ್ಲ. ‘ಪುಷ್ಪ’ (Pushpa) ಸಿನಿಮಾದ ‘ಉ ಅಂಟಾವಾ ಮಾವ’ ಹಾಡಿನಲ್ಲಿ ಅವರು ಸಖತ್ ಹಾಟ್ ಆಗಿ ನಟಿಸಿದ್ದರು. ಅಲ್ಲದೇ, ‘ಫ್ಯಾಮಿಲಿ ಮ್ಯಾನ್ 2ʼ ವೆಬ್ ಸಿರೀಸ್‌ನಲ್ಲೂ ಅವರ ಪಾತ್ರ ಬೋಲ್ಡ್ ಆಗಿತ್ತು. ಸಿಟಾಡೆಲ್ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.
View this post on Instagram
ಸದ್ಯ ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಜೊತೆ ಸಮಂತಾ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.