ನಾನಾ ರೀತಿಯ ಫೋಟೋ ಶೂಟ್ ಗಳನ್ನು ಮಾಡಿಸಿ, ಅಭಿಮಾನಿಗಳಿಗಾಗಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡುತ್ತಲೇ ಇರುತ್ತಾರೆ ದಕ್ಷಿಣದ ಖ್ಯಾತ ನಟಿ ಸಾಕ್ಷಿ ಅಗರವಾಲ್ (Sakshi Agrawal). ಇತ್ತೀಚೆಗೆ ಸಾಕ್ಷಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋ ನೋಡಿದ ನೆಟ್ಟಿಗನೊಬ್ಬ ಸಾಕ್ಷಿಯನ್ನು ಕೆದಕಿದ್ದ. ಅದಕ್ಕೆ ತಕ್ಕ ಉತ್ತರ ಎನ್ನುವಂತೆ ಫೋಟೋವನ್ನು ಶೇರ್ ಮಾಡಿದ್ದಾರೆ ಸಾಕ್ಷಿ.
ಫೋಟೋವೊಂದರ ಕೆಳಗೆ ಕಾಮೆಂಟ್ ಮಾಡಿದ್ದ ನೆಟ್ಟಿಗ ‘ಸೌತ್ ನಟಿಯರು ಒಳ ಉಡುಪು (Underwear) ಹಾಕದೇ ಫೋಟೋಶೂಟ್ ಮಾಡಿಸಿಕೊಳ್ಳುವ ಧೈರ್ಯವಿಲ್ಲ.
ಒಳ ಉಡುಪಿನಲ್ಲೂ ಫೋಟೋ ಶೂಟ್ ಮಾಡಿಸಿಕೊಳ್ಳುವ ಧೈರ್ಯ ಎಲ್ಲಿದೆ ಎಂದು ಕೆಣಗಿದ್ದ. ಆ ನೆಟ್ಟಿಗನಿಗೆ ತಕ್ಕ ಉತ್ತರ ಎನ್ನುವಂತೆ ಒಳಉಡುಪು ಹಾಕದೇ ಫೋಟೋಶೂಟ್ ಮಾಡಿಸಿ, ಆ ಫೋಟೋವನ್ನು ಹಂಚಿಕೊಂಡಿದ್ದಾರೆ ಸಾಕ್ಷಿ.
ಆ ನೆಟ್ಟಿಗನಿಗೆ ಬರೀ ಫೋಟೋ ಮೂಲಕ ಮಾತ್ರವಲ್ಲ, ಸೌತ್ ನಟಿಯರಿಗೆ ಆ ರೀತಿಯ ಉಡುಪು ಧರಿಸಿ, ಫೋಟೋ ಶೂಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಟ್ಯಾಲೆಂಟ್ ನಿಂದ ಅವರು ಅವಕಾಶ ಪಡೆಯುತ್ತಾರೆ ಅಂತಾನೂ ತಿರುಗೇಟು ನೀಡಿದ್ದರು. ಅನೇಕರು ಸಾಕ್ಷಿ ಪರ ಕಾಮೆಂಟ್ ಮಾಡಿದ್ದರು. ಇದೀಗ ಫೋಟೋಗೂ ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು
ಸಾಕ್ಷಿ ಕೇವಲ ತಮಿಳು, ತೆಲುಗಿನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಒಂದು ಚಿತ್ರದಲ್ಲಿ ನಟಿಸಿದ್ದಾರೆ.
ಜಗ್ಗೇಶ್ ಮುಖ್ಯಭೂಮಿಕೆಯ ಸಾಫ್ಟ್ ವೇರ್ ಗಂಡ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಅವರು ಗ್ಲಾಮರೆಸ್ ಪಾತ್ರ ಮಾಡಿದ್ದರು.
ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಬಿಗ್ ಬಾಸ್ ಶೋನಲ್ಲೂ ಸಾಕ್ಷಿ ಭಾಗಿಯಾಗಿದ್ದರು.
ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 3ರಲ್ಲಿ ಸಾಕ್ಷಿ ದೊಡ್ಮೆನೆಯ ಸದಸ್ಯಯಾಗಿ ಮನೆ ಪ್ರವೇಶ ಮಾಡಿದ್ದರು. ಈ ಮೂಲಕವೂ ಅವರು ಫೇಮಸ್ ಆಗಿದ್ದರು.