‘ಗದರ್ 2′ (Gadar 2) ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ (Sunny Deol) ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಸನ್ನಿ ಡಿಯೋಲ್ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕೈ ಜೋಡಿಸಿದ್ದಾರೆ. ಈ ಇಬ್ಬರ ಹೊಸ ಸಿನಿಮಾಗೆ ‘ಎಸ್‌ಡಿಜಿಎಂ’ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಇಬ್ಬರೂ ಹಾಟ್ ಬೆಡಗಿಯರ ಜೊತೆ ಸನ್ನಿ ಡಿಯೋಲ್ ಡ್ಯುಯೇಟ್ ಹಾಡಲಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಗೋಪಿಚಂದ್ ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ:‘ಕಲ್ಕಿ’ ಇವೆಂಟ್‌ಗೆ 1,14,000 ಮೌಲ್ಯದ ಡ್ರೆಸ್ ಧರಿಸಿ ಬಂದ ದೀಪಿಕಾ ಪಡುಕೋಣೆ
‘ಕ್ರ‍್ಯಾಕ್’ ಮತ್ತು ‘ವೀರ ಸಿಂಹ ರೆಡ್ಡಿ’ ಸತತ ಎರಡು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ‘ಎಸ್‌ಡಿಜಿಎಂ’ ಚಿತ್ರದ ಮೂಲಕ ಆಕ್ಷನ್ ಎಂಟರ್‌ಟೈನರ್ ಕಥೆ ಹೇಳಲಿದ್ದಾರೆ. ಗೋಪಿಚಂದ್ ಹೇಳಿದ ಕಥೆಗೆ ಸನ್ನಿ ಡಿಯೋಲ್ ಕೂಡ ಥ್ರಿಲ್ ಆಗಿದ್ದಾರೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಮೂಡಿ ಬರಲಿದ್ದು, ಇದೇ ತಿಂಗಳ 22ರಿಂದ ಚಿತ್ರೀಕರಣ ಶುರುವಾಗಲಿದೆ.
ಈ ಚಿತ್ರದಲ್ಲಿ ಸೈಯಾಮಿ ಖೇರ್ (Saiyami Kher) ಮತ್ತು ರೆಜಿನಾ ಕಸ್ಸಂದ್ರ (Regina Cassandra) ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಇಬ್ಬರೂ ಹಾಟ್ ನಟಿಯರ ಜೊತೆ ಸನ್ನಿ ಡಿಯೋಲ್ (Sunny Deol) ರೊಮ್ಯಾನ್ಸ್ ಮಾಡಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ, ತಮನ್ ಎಸ್ ಸಂಗೀತ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.