ಹೈದರಾಬಾದ್: ನಟಿ ಸಾಯಿ ಪಲ್ಲವಿ ಅವರು ಬರೋಬ್ಬರಿ 2 ಕೋಟಿ ಪ್ರಾಜೆಕ್ಟ್ ತಿರಸ್ಕರಿಸಿದ್ದಾರೆ.
ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ.
ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷರಿಗೆ ಪರಿಚಯಿಸಬೇಕಿತ್ತು. ಈ ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಿದೆ. ಆದರೆ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ.
ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಕಾರಣದಿಂದ ಅವರು ಫೇಸ್ ಕ್ರೀಮ್ ಆಫರ್ ರಿಜೆಕ್ಟ್ ಮಾಡಿದ್ದಾರೆ.