ಕಿರುತೆರೆ ಪುಟ್ಟಗೌರಿ (PuttaGowri) ಸಾನ್ಯ ಅಯ್ಯರ್ (Saanya Iyer) ಬಿಗ್ ಬಾಸ್ ಮನೆಗೆ (Bigg Boss) ಕಾಲಿಟ್ಟು ಸಖತ್ ಸೌಂಡ್ ಮಾಡಿದ್ದರು. ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ಜೊತೆಗೆ ಶೋನಿಂದ ಜನಪ್ರಿಯತೆ ಕೂಡ ಸಿಕ್ಕಿತ್ತು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಅನೇಕ ವಿಚಾರಗಳಿಗೆ ನಟಿ ಸೌಂಡ್ ಮಾಡ್ತಿದ್ದಾರೆ. ವಿವಾದಗಳನ್ನು ಮೈಮೇಲೆ ಎಳ್ಕೊಳ್ಳೋದ್ರಲ್ಲಿ ಸಾನ್ಯಾ (Saanya) ಎತ್ತಿದ ಕೈ. ಇದೀಗ ಅವರ ಅಮ್ಮನ ಡ್ರೆಸ್ ಕಾರಣಕ್ಕೆ ಮತ್ತೆ ಸೌಂಡ್ ಮಾಡ್ತಿದ್ದಾರೆ. ಸಾನ್ಯ ಅವರ ತಾಯಿ ದೀಪಾ ಅಯ್ಯರ್ ಧರಿಸಿದ ಡ್ರೆಸ್ ಬಗ್ಗೆ ನೆಗೆಟಿವ್ ಕಾಮೆಂಟ್ ಬಂದ ಬೆನ್ನಲ್ಲೇ ಸಾನ್ಯ ಖಡಕ್ ಆಗಿ ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚಿಗೆ ದೀಪಾ ಅಯ್ಯರ್ ಅವರ (Deepa Iyer) ಹುಟ್ಟುಹಬ್ಬವಿತ್ತು. ಹಾಗಾಗಿ ಸಾನ್ಯ ಅಮ್ಮನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ. ದೊಡ್ಡ ಹೊಟೇಲಿಗೆ ಕರೆದೊಯ್ದು ಕೇಕ್ ಆರ್ಡರ್ ಮಾಡಿ ಅಮ್ಮನಿಂದ ಕಟ್ ಮಾಡಿಸಿದ್ದಾರೆ. ಅಮ್ಮ ಕೇಕ್ ಕಟ್ ಮಾಡ್ತಿರೋವಾಗ ಬರ್ತ್‌ಡೇ ವಿಶ್ ಮಾಡಿದ್ದಾರೆ. ಈ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಶೇರ್ ಆಗ್ತಿದಂತೆ ದೀಪಾ ಅವರ ಡ್ರೆಸ್‌ಗೆ ನೆಗೆಟಿವ್ ಕಾಮೆಂಟ್ ಹರಿದು ಬರುತ್ತಿದೆ. ಇದನ್ನೂ ಓದಿ: ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್
View this post on Instagram
ದೀಪಾ ಅಯ್ಯರ್ ಅವರು ಮಾಡ್ರನ್ ಗೌನ್ (Modern Gown) ಧರಿಸಿದ್ದಾರೆ. ಕೊಂಚ ಮುಜುಗರದಿಂದಲೆ ಫೋಟೋಗೆ ಪೋಸ್ ಕೊಡ್ತಿರೋ ಹಾಗಿದೆ. ಈ ವೀಡಿಯೋವನ್ನು ಸಾನ್ಯ ತಮ್ಮ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿನೇ ಹೀಗಿರೋವಾಗ ಮಗಳು ಹಾಗಿರೋದ್ರಲ್ಲಿ ಆಶ್ಚರ್ಯ ಇಲ್ಲ ಎಂದು ಖಡಕ್ ಕಾಮೆಂಟ್ ಮಾಡಿದ್ದಾರೆ.
ಇದರ ಜೊತೆಗೆ ದೀಪಾ ಅಯ್ಯರ್ ಅವರ ಡ್ರೆಸ್ ಬಗ್ಗೆ ಕೆಟ್ಟ ಕೆಟ್ಟದಾದ ಇನ್ನೊಂದಿಷ್ಟು ಕಾಮೆಂಟ್ ಇದೆ. ಇದನ್ನು ನೋಡಿ ಸಾನ್ಯ ಕೆಂಡಾಮಂಡಲ ಆಗಿದ್ದಾರೆ. ನಾವ್ಯಾವ ಕಾಲದಲ್ಲಿದ್ದೀವಿ. ನಮಗೆ ಬೇಕಾದ ಬಟ್ಟೆಯನ್ನು ಹಾಕ್ಕೊಳ್ಳೋ ಸ್ವಾತಂತ್ರ‍್ಯನೂ ಕೂಡ ನಮಗಿಲ್ವಾ. ಯಾರು ಯಾವ ಥರದ ಬಟ್ಟೆ ಹಾಕ್ಕೊಬೇಕು ಅಂತ ಉಪದೇಶ ಕೊಡೋದಕ್ಕೆ ನೀವ್ಯಾರು, ನಿಮಗೆ ಬೇಕಾದ ಬಟ್ಟೆ ನೀವು ಹಾಕಿ, ಅದು ಬಿಟ್ಟು ಉಳಿದೋರ ಬಟ್ಟೆ ಬಗ್ಗೆ ಹೀಗೆಲ್ಲ ಕಾಮೆಂಟ್ ಮಾಡೋದು ತಪ್ಪು ಅಂತ ಕ್ಲಾಸ್ ತಗೊಂಡಿದ್ದಾರೆ.