ಬಿಗ್ ಬಾಸ್ (Bigg Boss Kannada) ಬೆಡಗಿ ಸಾನ್ಯ ಅಯ್ಯರ್ (Saanya Iyer) ಅವರು ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ಹಸಿಬಿಸಿ ಫೋಟೋಶೂಟ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈಗ ಒಂದು ಕಡೆ ಮಳೆ, ಮರೆಕೊರೆಯುವ ಚಳಿ ನಡುವೆ ಸಾನ್ಯ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಮಸ್ತ್ ಆಗಿ ಟ್ರೆಕ್ಕಿಂಗ್ ಮಾಡ್ತಿದ್ದಾರೆ.
ಹೌದು.. ಕಿರಿಕ್‌ಗಳ ಮೂಲಕವೇ ಸದ್ದು ಮಾಡುವ ನಟಿ ಸಾನ್ಯ ಅಯ್ಯರ್ ಅವರು ಇದೀಗ ಅಮ್ಮನ ಜೊತೆ ಕಾಶ್ಮೀರಕ್ಕೆ (Kashmir) ಹಾರಿದ್ದಾರೆ. ಟ್ರೆಕ್ಕಿಂಗ್‌ನ ಎಂಜಾಯ್ ಮಾಡ್ತಿದ್ದಾರೆ. ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅಭಿಮಾನಿಗಳು ಕೋರಿದ್ದಾರೆ.
ಪುಟ್ಟಗೌರಿ ಮದುವೆ (Putta Gowri Maduve) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಸಾನ್ಯ, ಬಾಲನಟಿಯಾಗಿ ಸಾಕಷ್ಟು ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದರು. ಆಟ ಆಡುವ ವಯಸ್ಸಿನಲ್ಲಿ ಕ್ಯಾಮೆರಾ ಮುಂದೆ ಬಂದ ಯುವನಟಿ ಸಾನ್ಯ, ಈಗ ಹೀರೋಯಿನ್ ಆಗೋದ್ದಕ್ಕೆ ತಾಲೀಮು ನಡೆಸುತ್ತಿದ್ದಾರೆ.
ಕಳೆದ ವರ್ಷ ಓಟಿಟಿ ಬಿಗ್ ಬಾಸ್, ಟಿವಿ ಬಿಗ್ ಬಾಸ್‌ನಲ್ಲಿ ನಟಿ ಸಾನ್ಯ ಅಯ್ಯರ್ ಅವರು ಗುರುತಿಸಿಕೊಂಡರು. ಗಟ್ಟಿ ಸ್ಪರ್ಧಿಯಾಗಿದ್ರು, ಹೆಚ್ಚಾಗಿ ಸುದ್ದಿಯಾಗಿದ್ದು, ರೂಪೇಶ್ ಶೆಟ್ಟಿ (Roopesh Shetty) ಅವರ ಜೊತೆಗಿನ ಒಡನಾಟದಿಂದ ನಟಿ ಹೈಲೆಟ್ ಆದ್ರು. ದೊಡ್ಮನೆ ಆಟ ಮುಗಿದ ಮೇಲೆ ಸಿನಿಮಾ ಅವಕಾಶಗಳು ಸಿಗುತ್ತೆ ಅಂತಾ ಕಾದು ಕುಳಿತಿರೋ ಸಾನ್ಯಗೆ ಕೊಂಚ ಬೇಸರವಾಗಿದೆ. ಸಿನಿಮಾ ಅವಕಾಶಕ್ಕಿಂತ ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಕೈ ಮೇಲೆತ್ತಿ ಹೊಟ್ಟೆ ಕಾಣುವಂತೆ ಪೋಸ್ ಕೊಟ್ಟ ಅನಸೂಯಾಗೆ ನೆಟ್ಟಿಗರಿಂದ ಕ್ಲಾಸ್
ಕೆಲ ದಿನಗಳ ಹಿಂದೆ ಸಾನ್ಯ ಅಯ್ಯರ್ ಅವರು ಬಾಲಿವುಡ್‌ನ (Bollywood) ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ನಟಿ ಸೆರೆಯಾದರು. ಸಿನಿಮಾ ಚಾನ್ಸ್‌ಗಾಗಿ ಹಾಟ್ & ಬೋಲ್ಡ್ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ರು. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಇವ್ರು ನಮ್ಮ ಕನ್ನಡದ ಹುಡುಗಿ ಪುಟ್ಟಗೌರಿನಾ ಎಂದು ಬಾಯಿ ಮೇಲೆ ಬೆರಳಿಡೋ ಹಾಗೆ ಕ್ಯಾಮೆರಾಗೆ ಪೋಸ್ ಕೊಟ್ಟರು. ಬಗೆ ಬಗೆಯ ಅವತಾರದಲ್ಲಿ ನಟಿ ಕಾಣಿಸಿಕೊಂಡರು. ಈ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]