ಸಾನ್ಯ ಬರ್ತ್‌ಡೇಯಲ್ಲಿ ಕಾಣಿಸಿಕೊಂಡ ರೂಪೇಶ್ ಶೆಟ್ಟಿಗೆ ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

Public TV
1 Min Read
saanya iyer 4

ಬಿಗ್ ಬಾಸ್ ಬೆಡಗಿ ಸಾನ್ಯ ಅಯ್ಯರ್ (Saanya Iyer) ಹೀರೋಯಿನ್ ಆಗಿ ‘ಗೌರಿ’ (Gowri) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಇದೇ ಖುಷಿಯಲ್ಲಿ ಬಿಗ್ ಬಾಸ್ ಸ್ನೇಹಿತರು, ಆಪ್ತರ ಜೊತೆ ಗ್ರ್ಯಾಂಡ್‌ ಆಗಿ ಸಾನ್ಯ ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಕೂಡ ಪಾಲ್ಗೊಂಡಿದ್ದಾರೆ. ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಈ ಜೋಡಿಗೆ ಫ್ಯಾನ್ಸ್ ವಿಶೇಷ ಬೇಡಿಕೆಯೊಂದನ್ನ ಇಟ್ಟಿದ್ದಾರೆ.

saanya

ಸೆ.21ರಂದು ಸಾನ್ಯ ಅಯ್ಯರ್ ಜನ್ಮದಿನದಂದು ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು, ಗೌರಿ ಚಿತ್ರತಂಡದ ಜೊತೆ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದು, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಕೂಡ ಭಾಗಿಯಾಗಿ ಸಾನ್ಯಗೆ ವಿಶ್ ಮಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಜೋಡಿಯ ಫೋಟೋ ನೋಡ್ತಿದ್ದಂತೆ ನಿಮ್ಮಿಬ್ಬರ ಮದುವೆ ಯಾವಾಗ? ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇಬ್ಬರ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

saanya 1 1

ಬಿಗ್ ಬಾಸ್ ಒಟಿಟಿ ಮತ್ತು ಟಿವಿ ಬಿಗ್ ಬಾಸ್‌ನಲ್ಲಿ ಒಟ್ಟಿಗೆ ಸ್ಪರ್ಧಿಸಿದ ಈ‌ ಜೋಡಿ ನಡುವೆ ಉತ್ತಮ ಒಡನಾಟವಿತ್ತು. ಪ್ರೇಮ ಪಕ್ಷಿಗಳೆಂದೇ ಬಿಂಬಿತರಾಗಿದ್ರು. ಇಬ್ಬರ ನಡುವೆ ಪ್ರೀತಿ ಇದ್ಯಾ? ಎಂದು ಕೇಳಿದ್ರೆ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಪ್ರತಿಕ್ರಿಯೆ ನೀಡ್ತಿದ್ದರು. ಇಬ್ಬರ ಬಾಂಧವ್ಯ ತೆರೆ ಹಿಂದೆ ಕೂಡ ಉತ್ತಮವಾಗಿದ್ದು, ಇಬ್ಬರು ಮದುವೆಯಾದರೆ ಚೆಂದ ಎಂಬುದು ಅಭಿಮಾನಿಗಳ ಆಶಯ. ಅದು ನೆರವೇರುತ್ತಾ? ಕಾಯಬೇಕಿದೆ. ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ನಟ ಕಮಲ್ ಹಾಸನ್ ಸಿದ್ಧತೆ

ಇಂದ್ರಜೀತ್ ಲಂಕೇಶ್ (Indrajit Lankesh) ನಿರ್ದೇಶನದ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಎಂಟ್ರಿ ಕೊಡಲಿದ್ದಾರೆ. ಸಾನ್ಯ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ಇಂದ್ರಜಿತ್, ಸಮರ್ಜಿತ್, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಅನುಪಮಾ ಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article