ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್‌ಗೆ (Rukmini Vasanth) ಚಿತ್ರರಂಗದಲ್ಲಿ ಅದೃಷ್ಟ ಕೈಹಿಡಿದಿದೆ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಪ್ರಿಯಾ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಈಗ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
‘ಬೀರ್‌ಬಲ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ರುಕ್ಮಿಣಿ ಎಂಟ್ರಿ ಕೊಟ್ಟರು. ಬಳಿಕ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಮನೋಜ್ಞವಾಗಿ ನಟಿಸಿದ್ದರು. ಈಗ ಪರಭಾಷೆಯಲ್ಲಿ ಆಫರ್ ಸಿಕ್ಕರೂ ಕೂಡ ಕನ್ನಡ ಚಿತ್ರಗಳಿಗೆ ನಟಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಸದ್ಯ ಶ್ರೀಮುರಳಿ ನಟನೆಗ ಬಘೀರ ಸಿನಿಮಾದಲ್ಲಿ ರುಕ್ಮಿಣಿ ನಾಯಕಿಯಾಗಿದ್ದು, ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ನಟನೆ ‘ಭೈರತಿ ರಣ್‌ಗಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಾಪ್ಟರ್ -1ರಲ್ಲಿ (Kantara 1) ರುಕ್ಮಿಣಿಗೆ ಅವಕಾಶ ಸಿಕ್ಕಿದೆ ಎನ್ನಲಾಗಿದೆ.
View this post on Instagram
ತಮಿಳಿನ ನಟ ವಿಜಯ್ ಸೇತುಪತಿ (Vijay Sethupathi) ಜೊತೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಸದ್ಯದಲ್ಲೇ ಆ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ. ಈ ಚಿತ್ರದಲ್ಲಿ ನಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ತಮಟೆ ಹಿಡಿದು ಹಳ್ಳಿ ಹುಡುಗಿಯಾಗಿ ಮಿಂಚಿದ ರೀಷ್ಮಾ ನಾಣಯ್ಯ
ಶಿವಕಾರ್ತಿಕೇಯನ್ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ತೆಲುಗಿನ ಕೆಲವು ಸಿನಿಮಾಗಳ ಮಾತುಕತೆ ಕೂಡ ಆಗಿದೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.