ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

Public TV
1 Min Read
rukmini vasanth 1

ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್ ಅವರು ಇದೀಗ ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾರನ್ನು (Sreeleela) ಬಿಟ್ಟು ರುಕ್ಮಿಣಿ ವಸಂತ್‌ಗೆ (Rukmini Vasanth) ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಅರಸಿ ಬರುತ್ತಿದೆ.

rukmini vasanth

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತೆಲುಗು ವರ್ಷನ್ ಟಾಲಿವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ರುಕ್ಮಿಣಿ ನಟಿಸಿದ ಪುಟ್ಟಿ ಪಾತ್ರ ತೆಲುಗು ಮಂದಿಗೆ ಮೋಡಿ ಮಾಡಿದೆ. ಹಾಗಾಗಿಯೇ ತೆಲುಗಿನಲ್ಲಿ ಕನ್ನಡದ ಬೆಡಗಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ:ಇಡೀ ಜಗತ್ತು ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠೆ’ ನೋಡಲು ಕಾಯುತ್ತಿದೆ- ಶಂಕರ್ ಮಹಾದೇವನ್

rukmini vasanthವಿಜಯ್ ದೇವರಕೊಂಡ (Vijay Devarakonda) ನಟನೆಯ ಮುಂದಿನ ಚಿತ್ರದಲ್ಲಿ ನಟಿಸುವ ಅವಕಾಶ ರುಕ್ಮಿಣಿಗೆ ಸಿಕ್ಕಿದೆ ಎನ್ನಲಾಗಿತ್ತು. ಈ ಸುದ್ದಿ ಬೆನ್ನಲ್ಲೇ ತೆಲುಗಿನ ಮತ್ತೊಬ್ಬ ಸ್ಟಾರ್ ರವಿತೇಜಾ (Ravi Teja)  ಜೊತೆ ರುಕ್ಮಿಣಿ ನಟಿಸುತ್ತಾರೆ. ಈ ಚಿತ್ರದ ಬಗ್ಗೆ ಮಾತುಕತೆ ಆಗಿದೆ ಎನ್ನಲಾಗುತ್ತಿದೆ.

rukmini vasanth 1 1

ರವಿತೇಜಾ (Ravi Reja) ನಟನೆಯ ಮುಂಬರುವ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿರುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಚಿತ್ರಕ್ಕೆ ನಟಿ ಸಹಿ ಮಾಡಿದ್ದಾರೆ ಎನ್ನುವ ಚರ್ಚೆ ಆಗುತ್ತಿದೆ. ಅನುದೀಪ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜನವರಿ 26ಕ್ಕೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಸುದ್ದಿಗೆ ಸದ್ಯದಲ್ಲೇ ಅಧಿಕೃತ ಅಪ್‌ಡೇಟ್ ಸಿಗಲಿದೆ.

ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹವಾ ಇರೋ ಟೈಮ್‌ನಲ್ಲಿಯೇ ರುಕ್ಮಿಣಿಗೆ ಬಂಪರ್ ಅವಕಾಶಗಳು ಸಿಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಮೊದಲೇ ತೆಲುಗಿನಲ್ಲಿ ಕನ್ನಡತಿರಿಗೆ ಡಿಮ್ಯಾಂಡ್ ಜಾಸ್ತಿ ಹಾಗಾಗಿ ರುಕ್ಮಿಣಿ ನಂಬರ್ ಒನ್ ನಟಿಯಾಗಿ ನಿಲ್ಲೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.

Share This Article