‘ಬೀರಬಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಚೆಲುವೆ ರುಕ್ಮಿಣಿ ವಸಂತ್ (Rukmini Vasanth) ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕನ್ನಡ ಚಿತ್ರರಂಗದಲ್ಲಿ ಮಿಂಚ್ತಿರುವ ಯುವ ನಟಿ ರುಕ್ಮಿಣಿ ಈಗ ತಮಿಳಿನಲ್ಲಿ ಬಂಪರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ನಟ ವಿಜಯ್ ಸೇತುಪತಿಗೆ (Vijay Sethupathi) ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಜೊತೆ ಬಾನದಾರಿಯಲಿ, ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacche Yello) ಸಿನಿಮಾ ತೆರೆಗೆ ಬರುವ ಮುನ್ನವೇ ತಮಿಳಿನಲ್ಲಿ ಸೂಪರ್ ಸ್ಟಾರ್ ಮಿಂಚುವ ಅವಕಾಶವನ್ನ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್‌ಗೆ ಹಾರಿದ ಅಜಯ್ ದೇವಗನ್ ಪುತ್ರಿ- ಬಾಯ್ ಫ್ರೆಂಡ್ ಜೊತೆ ಭರ್ಜರಿ ಪಾರ್ಟಿ
View this post on Instagram
ಆರ್ಮುಗ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ವಿಜಯ್- ರುಕ್ಮಿಣಿ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತವನ್ನ ಮಲೇಷಿಯಾದಲ್ಲಿ ಅದ್ದೂರಿಯಾಗಿ ನಡೆದಿದೆ. ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಮಲೇಷಿಯಾದಲ್ಲೇ ಶುರುವಾಗಲಿದೆ.
ಒಂದು ಭಿನ್ನ ಕಥೆಯ ಮೂಲಕ ವಿಜಯ್- ರುಕ್ಮಿಣಿ ಬರುತ್ತಿದ್ದಾರೆ. ಈ ಮೂಲಕ ಕಾಲಿವುಡ್ ಅಂಗಳಕ್ಕೆ ಮತ್ತೊಬ್ಬ ಕನ್ನಡತಿಯ ಎಂಟ್ರಿಯಾಗಿದೆ. ಇನ್ನೂ ಚಿತ್ರದಲ್ಲಿ ಯೋಗಿ ಬಾಬು, ಬಿ.ಎಸ್ ಅವಿನಾಶ್, ದಿವ್ಯಾ ಸೇರಿದಂತೆ ಹಲವರು ಕಲಾವಿದರಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗಲಿದೆ.