ಕಾನ್ ಫಿಲ್ಮ್ ಫೆಸ್ಟಿವಲ್ ಹಬ್ಬವು (Cannes Film Festival 2025) ಫ್ರಾನ್ಸ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡತಿ ದಿಶಾ ಮದನ್ ಕಾನ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಬೆನ್ನಲ್ಲೇ ರಾಜಸ್ತಾನದ ಮೂಲದ ನಟಿ ರುಚಿ ಗುಜ್ಜರ್ ಕೂಡ ಭಾಗಿಯಾಗಿದ್ದಾರೆ. ಕತ್ತಲ್ಲಿ ಪಿಎಂ ಮೋದಿ ಭಾವಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿರೋದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ʻಕಿಲ್ಲರ್ʼ ಬ್ಯೂಟಿಯ ಮಾದಕ ಲುಕ್‌ಗೆ ಪಡ್ಡೆ ಹುಡುಗರು ಫಿದಾ – ಟ್ಯಾಟೂ ಮಸ್ತ್ ಆಗಿದೆ ಅಂದ್ರು ಫ್ಯಾನ್ಸ್!
ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು 24 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಅದರಂತೆ ನಟಿ ರುಚಿ ಗುಜ್ಜರ್ (Ruchi Gujjar) ಅವರಿಗೂ ಈ ಸಿನಿಮಾ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ಇದನ್ನೂ ಓದಿ:ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು
ದುಬಾರಿ ಲೆಹೆಂಗಾ ಧರಿಸಿ ಯುವರಾಣಿಯಂತೆ ನಟಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ. ಪಿಎಂ ನರೇಂದ್ರ ಮೋದಿ (Narendra Modi) ಅವರ ಫೋಟೋವಿರುವ ನೆಕ್ಲೆಸ್‌ನಲ್ಲಿ ನಟಿ ರುಚಿ ಕಂಗೊಳಿಸಿದ್ದಾರೆ. ಈ ಮೂಲಕ ಮೋದಿ ಅವರಿಗೆ ನಟಿ ವಿಶೇಷವಾಗಿ ಗೌರವ ಸೂಚಿಸಿದ್ದಾರೆ. ನಟಿಯ ವಿಭಿನ್ನ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಒಂದಿಷ್ಟು ಮಂದಿ ಅವರನ್ನು ಟೀಕಿಸುತ್ತಿದ್ದಾರೆ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಎಂದು ನಟಿಯ ಕಾಲೆಳೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿ, ಈ ನೆಕ್ಲೆಸ್ ಜ್ಯುವೆಲರಿ ಎನ್ನುವುದಕ್ಕಿಂತ ಹೆಚ್ಚಾಗಿ ಬಲದ ಸಂಕೇತ, ಗುರಿ ಹಾಗೂ ವಿಶ್ವ ಮಟ್ಟದಲ್ಲಿ ಭಾರತ ಬೆಳವಣೆಯಾಗುತ್ತಿರುವುದರ ಸಂಕೇತ. ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಾನು ಈ ನೆಕ್ಸೆಸ್ ಅನ್ನು ಧರಿಸಿ ಬಂದಿದ್ದೇನೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸೂಚಿಸುತ್ತಿದ್ದೇನೆ. ಅವರ ನಾಯಕತ್ವದಿಂದ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎಂದು ನಟಿ ರಚಿ ಗುಜ್ಜರ್ ಹೇಳಿದ್ದಾರೆ.
ನಟಿ, ಮಾಡೆಲ್ ಆಗಿರುವ ರುಚಿ ಗುಜ್ಜರ್ ಅವರು ಸಾಕಷ್ಟು ಆಲ್ಬಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ.