ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದ ರಿಚಾ ಚಡ್ಡಾ (Richa Chadda) ಅವರ ಬೇಬಿ ಬಂಪ್ (Baby Bump) ಗೆ ಮುತ್ತಿಕ್ಕುವ ಮೂಲಕ ಟ್ರೋಲ್ ಆಗಿದ್ದಾರೆ ಹಿರಿಯ ನಟಿ ರೇಖಾ ಚಡ್ಡಾ. ರಿಚಾ ನಟನೆಯ ಹೀರಾಮಂಡಿ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ರೇಖಾ (Rekha) ಅವರು, ರಿಚಾ ನಟನೆ ಕಂಡು ತಬ್ಬಿಕೊಂಡರು. ನಂತರ ರಿಚಾರ ಬೇಬಿ ಬಂಪ್ ಗೆ ಕಿಸ್ ಮಾಡಿದ್ದಾರೆ.
ಈ ಹಿಂದೆ ರಿಚಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಾಯಿಯ ಮಹತ್ವವನ್ನೂ ತಿಳಿಸಿದ್ದರು.
‘1 + 1= 3’ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಮತ್ತು ಅಲಿ ಫಜಲ್ ದಂಪತಿ ಪೋಷಕರಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ‘ಒಂದು ಚಿಕ್ಕ ಹಾರ್ಟ್‌ಬೀಟ್ ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ’ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್ ಹಂಚಿಕೊಂಡಿದ್ದರು. ರಿಚಾ ದಂಪತಿಗೆ ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ ಸೇರಿದಂತೆ ಅನೇಕರು ಶುಭಹಾರೈಸಿದ್ದರು.
ಸೆಪ್ಟೆಂಬರ್ 23ರಂದು ರಿಚಾ ಮತ್ತು ಅಲಿ ಫಜಲ್ (Ali Fazal) ಅದ್ಧೂರಿಯಾಗಿ ಮದುವೆಯಾದರು. ಬಳಿಕ ಮುಂಬೈ, ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದರು. ಅಂದಹಾಗೆ, ಸಿನಿಮಾ ಸೆಟ್‌ವೊಂದರಲ್ಲಿ ರಿಚಾ ಮತ್ತು ಅಲಿ ಅವರಿಗೆ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 10 ವರ್ಷಗಳ ಡೇಟಿಂಗ್ ನಂತರ 2022ರಲ್ಲಿ ಈ ಜೋಡಿ ಮದುವೆಯಾದರು.