Bengaluru CityCinemaKarnatakaLatestMain PostSandalwood

`ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

ʻಏಕ್ ಲವ್ ಯಾʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ನಟಿಸಿದ ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ ರೀಷ್ಮಾ ವಾಮನ ಧನ್ವೀರ್‌ಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.

ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ `ವಾಮನ’ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. `ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್‌ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು. ಪಕ್ಕ ಔಟ್ ಆ್ಯಂಡ್ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿರುವ `ವಾಮನ’ ಚಿತ್ರದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಕೂಡ ಇದೆ.

ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ಧನ್ವೀರ್ ಫಸ್ಟ್ ಲುಕ್ ಹಾಗೂ ಮೇಕಿಂಗ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಖತ್ ಮಾಸ್ ಅವತಾರದಲ್ಲಿ ಶೋಕ್ದಾರ್ ಮಿಂಚಿದ್ದು, ಶೀಘ್ರದಲ್ಲಿ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಗೆ ಸಜ್ಜಾಗ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

ಇನ್ನೂ ರೀಷ್ಮಾ ನಾಣಯ್ಯ ನಟನೆಯ ಮುಂಬರುವ ಚಿತ್ರ, ಶ್ರೇಯಸ್ ಜತೆ `ರಾಣಾ’, ಗೋಲ್ಡನ್ ಸ್ಟಾರ್ ಜತೆ `ಬಾನದಾರಿಯಲ್ಲಿ’ ಇದೀಗ ವಾಮನ ಸಿನಿಮಾಗಳಿದ್ದು, ಒಂದಿಷ್ಟು ಸಿನಿಮಾಗಳು ಮಾತುಕತೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಬ್ಯೂಟಿ ರೀಷ್ಮಾ ತಮ್ಮ ಸಿನಿಮಾಗಳ ಮೂಲಕ ಎಷ್ಟರ ಮಟ್ಟಿಗೆ ಸೌಂಡ್ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button