ರಜನಿಕಾಂತ್ (Rajanikanth) ನಟನೆಯ ಬಹುನಿರೀಕ್ಷಿತ ‘ಕೂಲಿ’ (Coolie) ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಶ್ರುತಿ ಹಾಸನ್ ನಂತರ ಕನ್ನಡದ ‘ರತ್ನನ್ ಪ್ರಪಂಚ’ ನಟಿ ರೆಬಾ ಮೋನಿಕಾ ಕೂಡ ಕೂಲಿ ಚಿತ್ರತಂಡ ಸೇರಿಕೊಂಡಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರಕ್ಕೆ ಸಲಾರ್ ಬ್ಯೂಟಿ ಶ್ರುತಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಕನ್ನಡದ ನಟಿ ರೆಬಾ ಮೋನಿಕಾ (Reba Monica) ಕೂಡ ಕೈಜೋಡಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:Kantara Chapter 1: ಮಳೆ ಅವಾಂತರದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ ರಿಷಬ್ ಶೆಟ್ಟಿ
ಈ ಸುದ್ದಿಗೆ ಪೂರಕವೆಂಬಂತೆ ನಟಿ ಕೂಡ ಹೊಸ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ. ಈ ಚಿತ್ರ ತುಂಬಾನೇ ಸ್ಪೆಷಲ್ ನನಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿ ಎಂದು ನಟಿ ರೆಬಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಪರೋಕ್ಷವಾಗಿ ನಟಿ ‘ಕೂಲಿ’ ಚಿತ್ರದ ಬಗ್ಗೆ ಸುಳಿವು ನೀಡಿದ್ದರು. ಇನ್ನೂ ಈ ಸುದ್ದಿ ನಿಜನಾ? ಎಂದು ಚಿತ್ರತಂಡ ಕಡೆಯಿಂದ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.
ಅಂದಹಾಗೆ, ಕನ್ನಡದ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಡಾಲಿ ಧನಂಜಯಗೆ (Daali Dhananjay) ನಾಯಕಿಯಾಗಿ ರೆಬಾ ಮೋನಿಕಾ ನಟಿಸಿದ್ದರು. ಈ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ನಿರ್ಮಾಣ ಮಾಡಿತ್ತು.