ತೆಲುಗು- ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ‘ಗರ್ಲ್‌ಫ್ರೆಂಡ್’ ಸ್ಟೋರಿ ಹೇಳೋದಕ್ಕೆ ರೆಡಿಯಾಗಿದ್ದಾರೆ. ತೆಲುಗಿನ ಚಿತ್ರದ ಗರ್ಲ್‌ಫ್ರೆಂಡ್ ಪ್ರೋಮೋಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಇದನ್ನೂ ಓದಿ:ಕಾವೇರಿ ನೀರಿಗಾಗಿ ಸರ್ಕಾರಕ್ಕೆ ನಾವು ಒತ್ತಡ ತರಬೇಕು- ಶಿವಣ್ಣ
ರಶ್ಮಿಕಾ ಮಂದಣ್ಣ ‘ದಿ ಗರ್ಲ್‌ಫ್ರೆಂಡ್’ (The Girlfriend) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮಹಿಳಾ ಪ್ರದಾನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೋ ಸಹ ಕುತೂಹಲ ಮೂಡಿಸುತ್ತಿದೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ಬೇಸರದ ಮುಖಚಹರೆ ಪ್ರದರ್ಶಿಸುತ್ತಾರೆ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಣ್ಣು ಮುಚ್ಚಿಬಿಡುತ್ತಾರೆ. ರಶ್ಮಿಕಾ ನೀರಿಗೆ ಇಳಿದಿದ್ದು ಏಕೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ರಶ್ಮಿಕಾರನ್ನು ಕಾಪಾಡುವವರು ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಈ ಪ್ರೋಮೋ ಮೂಡಿಸುತ್ತಿದೆ.
View this post on Instagram
ಸಿನಿಮಾದ ಪ್ರೋಮೋ ನೋಡಿದರೆ ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ. ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಪ್ರೇಮ ಸಂಬಂಧದಿಂದ ಗರ್ಲ್‌ಫ್ರೆಂಡ್ ರಶ್ಮಿಕಾ ಮಂದಣ್ಣ ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ರಶ್ಮಿಕಾ ಎಕ್ಸ್‌ಪ್ರೆಶನ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಇದೇ ಡಿ.1ಕ್ಕೆ ಅನಿಮಲ್ (Animal) ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ರಣ್‌ಬೀರ್‌ಗೆ ಜೋಡಿಯಾಗಿ ಬರುತ್ತಿದ್ದಾರೆ. ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.


