ಕನ್ನಡದಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಗುರಿಯಾಗುವ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ನ್ಯಾಷಿನಲ್ ಕ್ರಶ್ ಆದ ಮೇಲಂತೂ ಸುದ್ದಿ ಮೇಲೆ ಸುದ್ದಿ ಆಗುತ್ತಿದ್ದಾರೆ. ಇದೀಗ ಅವರು ನಾಯಿಯನ್ನು ಮುದ್ದಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಆ ಫೋಟೋಗೂ ಮತ್ತು ಅವರ ಮಾಜಿಪ್ರೇಮಿ ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಚಿತ್ರಕ್ಕೂ ಹೋಲಿಕೆ ಮಾಡಲಾಗುತ್ತಿದೆ.
ಚಾರ್ಲಿ 777 ನಾಯಿ ಮತ್ತು ಮನುಷ್ಯನ ಪ್ರೇಮವನ್ನು ಪ್ರಮುಖವಾಗಿಟ್ಟುಕೊಂಡು ಮಾಡಿರುವ ಸಿನಿಮಾ. ಈ ಚಿತ್ರವನ್ನು ನೋಡಿ ಬಂದವರು, ತಮ್ಮ ಮನೆಯ ನಾಯಿಯನ್ನು ಮತ್ತಷ್ಟು ಪ್ರೀತಿಸುವ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸ್ವತಃ ಚಿತ್ರತಂಡವೇ ತನ್ನ ಸಾಮಾಜಿಕ ಜಾಲತಾಣಗಳ ಪೇಜ್ ನಲ್ಲಿ ಹಾಕಿಕೊಳ್ಳುತ್ತಿದೆ. ನಾಯಿಯನ್ನು ಸಾಕದೇ ಇರುವವರು, ಹೊಸ ನಾಯಿಯೊಂದಿಗೆ ಮನೆಗೆ ಮರಳುತ್ತಿದ್ದಾರೆ ಎನ್ನುವಲ್ಲಿಗೆ ಸುದ್ದಿಯಾಗಿದೆ. ಹಾಗಾಗಿ ರಶ್ಮಿಕಾ ಮತ್ತು ನಾಯಿಯ ಫೋಟೋ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?
ತಮ್ಮ ಮನೆಯ ನಾಯಿಯೊಂದಿಗೆ ರಶ್ಮಿಕಾ ಇರುವ ಕ್ಯೂಟ್ ಫೋಟೋವನ್ನು ಪೋಸ್ಟ್ ಮಾಡಿರುವ ಹಲವರು, ಕದ್ದುಮುಚ್ಚಿ ಚಾರ್ಲಿ ಸಿನಿಮಾ ನೋಡಿಬಿಟ್ಟರಾ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಿನಿಮಾವನ್ನು ನೋಡಿರುವ ಕಾರಣಕ್ಕಾಗಿಯೇ ತಮ್ಮ ನಾಯಿಯನ್ನು ಇಷ್ಟೊಂದು ಮುದ್ದಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ : ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗತ್ತಾ ಅವಕಾಶ
ಇದೇ ಸಿನಿಮಾಗೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ರಶ್ಮಿಕಾ ಅವರನ್ನು ಪ್ರಾಣಿಯೊಂದಿಗೆ ಹೋಲಿಸಿ ಗೇಲಿ ಮಾಡಿದ್ದರು. ಆದರೆ, ಈ ಬಾರಿ ಮತ್ತೊಂದು ರೀತಿಯಲ್ಲಿ ಗೇಲಿ ಮಾಡಲಾಗಿದೆ.