ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್ ಮತ್ತು ಬಾಲಿವುಡ್ ಇಂಡಸ್ಟ್ರಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನಿಮಲ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಹಿಂದಿ ನಟ ರಣ್‌ಬೀರ್ ಕಪೂರ್‌ಗೆ (Ranbir Kapoor) ರಶ್ಮಿಕಾ ಕನ್ನಡದ ಪಾಠ ಮಾಡಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದ ಟ್ರೈಲರ್, ಸಾಂಗ್ಸ್ ಎಲ್ಲವೂ ಮೋಡಿ ಮಾಡ್ತಿವೆ. ಅದರಲ್ಲೂ ರಶ್ಮಿಕಾ-ರಣ್‌ಬೀರ್ ಲಿಪ್‌ಲಾಕ್ ತುಣುಕು ಸಖತ್ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಇದೀಗ ರಶ್ಮಿಕಾ ನಡೆ ಅನೇಕರಿಗೆ ಇಷ್ಟವಾಗಿದೆ. ಇದನ್ನೂ ಓದಿ:ಬಿಕ್ಕಿ ಬಿಕ್ಕಿ ಅತ್ತು ‘ಬಿಗ್‌ಬಾಸ್’ ಮನೆಯಿಂದ ಹೊರ ಬಂದ ಸಂಗೀತಾ
ರಿಯಾಲಿಟಿ ಶೋವೊಂದಕ್ಕೆ ಗೆಸ್ಟ್ ಆಗಿ ರಣ್‌ಬೀರ್-ರಶ್ಮಿಕಾ ಎಂಟ್ರಿ ಕೊಡುವಾಗ ಪಾಪರಾಜಿ ಎದುರಿಗೆ ಸಿಕ್ಕಿದ್ದಾರೆ. ಏನು ನಮ್ಮ ಡಾಕ್ಯುಮೆಂಟರಿ ಮಾಡುತ್ತಾ ಇದ್ದೀರಾ? ಎಂದು ರಣ್‌ಬೀರ್ ಹೇಳಿದ್ದಾರೆ. ಬಳಿಕ ಏನಾದ್ರು ಕನ್ನಡದಲ್ಲಿ ಮಾತನಾಡಿ ಎಂದು ರಶ್ಮಿಕಾಗೆ ಪಾಪರಾಜಿ ಹೇಳಿದ್ದಾರೆ.
ಅದಕ್ಕೆ ಎಲ್ಲರಿಗೂ ನಮಸ್ಕಾರ ಎಂದಿದ್ದಾರೆ. ಬಳಿಕ ಹೇಗಿದ್ದೀರಾ? ಎಲ್ಲರಿಗೂ ನಮಸ್ಕಾರ ಎಂದು ರಣ್‌ಬೀರ್‌ಗೆ ರಶ್ಮಿಕಾ ಕನ್ನಡ ಕಲಿಸಿ ಕೊಟ್ಟಿದ್ದಾರೆ. ರಣ್‌ಬೀರ್ ಕೂಡ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
‘ಅನಿಮಲ್’ (Animal) ಚಿತ್ರ ಇದೇ ಡಿಸೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ರಣ್‌ಬೀರ್, ರಶ್ಮಿಕಾ, ಬಾಬಿ ಡಿಯೋಲ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ.