ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾನಾ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಚಾರ್ಲಿ 777 ಸಿನಿಮಾ ರಿಲೀಸ್ ಆದ ನಂತರ, ನಾಯಿ ಕಾರಣಕ್ಕಾಗಿ ಅವರು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ತಮ್ಮ ಮುದ್ದಿನ ನಾಯಿಯನ್ನು ಮುದ್ದಿಸುವ ರಶ್ಮಿಕಾ ಫೋಟೋ ಸಖತ್ ವೈರಲ್ ಆಗಿತ್ತು. ಚಾರ್ಲಿ ಸಿನಿಮಾವನ್ನು ಕದ್ದುಮುಚ್ಚಿ ನೋಡಿರುವ ರಶ್ಮಿಕಾ, ತನ್ನ ನಾಯಿ ಜೊತೆ ಭಾವನಾತ್ಮಕವಾಗಿ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು. ಇದೀಗ ಅದೇ ನಾಯಿಯ ವಿಚಾರಕ್ಕಾಗಿ ಮತ್ತೊಂದು ಸುದ್ದಿಯಾಗಿದ್ದಾರೆ ಕೊಡಗಿನ ಹುಡುಗಿ.
ರಶ್ಮಿಕಾ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಸಖತ್ ಬ್ಯುಸಿಯಾಗಿದ್ದಾರೆ. ಮನೆಗೆ ಹೋಗುವುದೇ ಅಪರೂಪ ಎನ್ನುವಂತಾಗಿದೆಯಂತೆ. ಅದರಲ್ಲೂ ತಮ್ಮ ಪ್ರೀತಿಯ ನಾಯಿಯನ್ನು ಬಿಟ್ಟು ಇರಲು ಅವರಿಂದ ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ತಮ್ಮೊಂದಿಗೆ, ನಾಯಿಗೂ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ದುಂಬಾಲು ಬೀಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಲವು ಮಾಧ್ಯಮಗಳು ಈ ಕುರಿತು ಸುದ್ದಿಯನ್ನೂ ಮಾಡಿವೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ
ಈ ವಿಷಯದ ಕುರಿತಂತೆ ಸ್ವತಂ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ಧಾರೆ. “ಈ ವಿಷಯ ನನಗೆ ಫನ್ನಿ ಅನಿಸುತ್ತಿದೆ. ಈ ದಿನವನ್ನು ಉಲ್ಲಾಸಗೊಳಿಸಿದೆ. ಸುದ್ದಿ ಕೇಳಿ ನಾನೂ ನಕ್ಕೆ. ನನ್ನ ನಾಯಿಯು ನನ್ನೊಂದಿಗೆ ಬರಲು ಇಚ್ಚೆ ಪಡುವುದಿಲ್ಲ. ಅದು ಹೈದರಾಬಾದ್ ಮನೆಯಲ್ಲೇ ಇರಲು ಇಷ್ಟ ಪಡುತ್ತಿದೆ. ಉಳಿದಂತೆ ಏನೂ ಹೇಳಲಾರೆ. ಒಳ್ಳೆಯದಾಗಲಿ’ ಎಂದು ಟ್ವಿಟ್ ಮಾಡಿದ್ದಾರೆ. ತಮ್ಮೊಂದಿಗೆ ನಾಯಿಗೂ ಟಿಕೆಟ್ ಹಾಕಬೇಕು ಎನ್ನುವುದನ್ನು ಅವರು ಈ ಮೂಲಕ ನಿರಾಕರಿಸಿದ್ದಾರೆ.