ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಈಗ ಬಹು ಬೇಡಿಕೆಯ ನಟಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ನಟಿ ರಶ್ಮಿಕಾ ತಾವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಹೇಳಿಕೊಂಡಿದ್ದಾರೆ.
ನಟಿ ರಶ್ಮಿಕಾ ‘ಡಿಯರ್ ಕಾಮ್ರೇಡ್’ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಹೀಗಾಗಿ ಸದ್ಯಕ್ಕೆ ಸಿನಿಮಾದ ಪ್ರಮೋಷನ್‍ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಇದೇ ವೇಳೆ ರಶ್ಮಿಕಾ ಭವಿಷ್ಯದಲ್ಲಿ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ನನ್ನ ಮದುವೆಯಾಗುವ ಹುಡುಗ ಒಳ್ಳೆಯ ವ್ಯಕ್ತಿಯಾಗಿರಬೇಕು. ನನ್ನನ್ನು ತುಂಬಾ ಇಷ್ಟ ಪಡಬೇಕು. ಅವರ ನಡವಳಿಕೆ ನನಗೆ ಇಷ್ಟವಾಗಬೇಕು. ಅವರು ನನ್ನ ಇಷ್ಟದ ಬಗ್ಗೆ ಕೇಳದಿದ್ದರೂ ಪರವಾಗಿಲ್ಲ. ಆದರೆ ನನ್ನ ಬಳಿ ಸುಳ್ಳು ಹೇಳಬಾರದು. ಎಂದು ಮದುವೆಯಾಗುವ ಹುಡುಗ ಬಗ್ಗೆ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಹುಡುಗನ ವಯಸ್ಸು ಎಷ್ಟಿದ್ದರೂ ಪರವಾಗಿಲ್ಲ. ಅಂತರದ ಬಗ್ಗೆ ನನಗೆ ತೊಂದರೆ ಇಲ್ಲ. ಆದರೆ ನನ್ನ ಜೊತೆ ಹೆಚ್ಚಿನ ಸಮಯ ಕಳೆಯಬೇಕು. ಯಾವಾಗಲೂ ರೊಮ್ಯಾಂಟಿಕ್ ಆಗಿ ಇರಬೇಕು. ಸೀರಿಯಸ್ ಆಗಿ ಇರಬಾರದು ಎಂದಿದ್ದಾರೆ.
ಜೊತೆಗೆ ಹುಡುಗ ಧೂಮಪಾನ ಮಾಡಬಾರದು. ನನಗೆ ಸ್ಮೋಕ್ ಅಂದರೆ ಇಷ್ಟವಾಗುದಿಲ್ಲ. ನಾನು ಸಿಗರೇಟು ಸೇದುವವರನ್ನು ತುಂಬಾನೇ ದ್ವೇಷ ಮಾಡುತ್ತೀನಿ ಎಂದಿದ್ದಾರೆ. ಕೊನೆಯದಾಗಿ ಮದುವೆ ಆಗುವ ಹುಡುಗ ತಮಗಿಂತ ಉದ್ದ ಇರಬೇಕು ಎಂದಿದ್ದಾರೆ ಎಂದು ತಿಳಿದು ಬಂದಿದೆ.