ಸೌತ್ ಮತ್ತು ಬಾಲಿವುಡ್ (Bollywood) ಅಂಗಳದಲ್ಲಿ ಮಿಂಚ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) `ವಾರಿಸು’ (Varisu) ಮತ್ತು `ಮಿಷನ್ ಮಜ್ನು’ (Mission Majnu) ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ನಡುವೆ ವಿಶ್ವದ ಪ್ರಸಿದ್ಧ ಫ್ಯಾಷನ್ನಲ್ಲಿ ಭಾಗವಹಿಸಲು ನಟಿ ರಶ್ಮಿಕಾ ಇಟಲಿ ಹಾರಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ತಮ್ಮ ಬ್ಯೂಟಿ ಸೀಕ್ರೆಟ್ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ.
ಅದೃಷ್ಟದ ನಟಿ ರಶ್ಮಿಕಾ ಮಂದಣ್ಣ ಪ್ರತಿಭೆ ಜೊತೆ ಲಕ್ ಕೂಡ ಕೈ ಹಿಡಿದಿದೆ. ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದಿಂದ ಸಿನಿಪಯಣ ಶುರು ಮಾಡಿದ್ದ ನಟಿ ಈಗ ನ್ಯಾಷನಲ್ ಕ್ರಶ್ ಆಗಿ ಬಾಲಿವುಡ್- ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ವರ್ಷದ ಆರಂಭದಲ್ಲಿಯೇ 2 ಸಿನಿಮಾ ಹಿಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್
View this post on Instagram
ಜಗತ್ತೀನ 4 ಫ್ಯಾಷನ್ ವೀಕ್ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್ನಲ್ಲಿ (Milan Fashion Week) ಭಾಗವಹಿಸಲು (ಫೆ.22)ದಂದು ಇಟಲಿಯತ್ತ ರಶ್ಮಿಕಾ ಪ್ರಯಾಣ ಬೆಳೆಸಿದ್ದಾರೆ. ಹೋಗುವ ಮುನ್ನ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಈ ವೇಳೆ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ರಶ್ಮಿಕಾಗೆ ಪಾಪರಾಜಿಗಳು ಕೇಳಿದ್ದಾರೆ.
ಪಾಪರಾಜಿಗಳ ಪ್ರಶ್ನೆಗೆ ನಾಚಿದ ರಶ್ಮಿಕಾ, ನನ್ನ ನಗುವೇ ನನ್ನ ಸೌಂದರ್ಯದ ಗುಟ್ಟು ಎಂದಿದ್ದಾರೆ. ನಂತರ ನನ್ನ ಸೌಂದರ್ಯಕ್ಕೆ ನೀವು ಕೂಡ ಕಾರಣ ಎಂದು ಪಾಪರಾಜಿಗಳಿಗೂ ಕ್ರೆಡಿಟ್ ನೀಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k