ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ- ಕ್ಷಮೆಯಾಚಿಸಿದ ಶ್ರೀವಲ್ಲಿ

Public TV
1 Min Read
rashmika mandanna 2

ನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಮಾಡಿರುವ ಯಡವಟ್ಟಿನಿಂದ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಬಾಯ್ತಪ್ಪಿ ಮಾತನಾಡಿ ಆ ನಂತರ ‘ಪುಷ್ಪ 2’ ಬೆಡಗಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ:ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

rashmika mandanna 1 4

‘ಪುಷ್ಪ 2’ (Pushpa 2) ಸಿನಿಮಾ ಸಕ್ಸಸ್ ಬಳಿಕ ಸಾಲು ಸಾಲು ಸಂದರ್ಶನಗಳಲ್ಲಿ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಆಗ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟನ ಬಗ್ಗೆ ನಟಿ ಮಾತನಾಡಿ, ದಳಪತಿ ವಿಜಯ್ ನನ್ನ ನೆಚ್ಚಿನ ನಟ. ಯಾಕಂದ್ರೆ ನಾನು ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ ‘ಗಿಲ್ಲಿ’ ಆ ಚಿತ್ರದಲ್ಲಿ ಅವರ ನಟನೆ, ಡ್ಯಾನ್ಸ್ ಇಷ್ಟವಾಗಿತ್ತು. ಅಂದಿನಿಂದ ವಿಜಯ್ ಸರ್ ಅಂದ್ರೆ ಇಷ್ಟ ಎಂದಿದ್ದಾರೆ. ‘ಗಿಲ್ಲಿ’ ತೆಲುಗಿನ ‘ಪೋಕಿರಿ’ ರೀಮೆಕ್ ಅಂತ ಇತ್ತೀಚೆಗೆ ಗೊತ್ತಾಯಿತು ಎಂದು ಬಾಯ್ತಪ್ಪಿ ಹೇಳಿದ್ದಾರೆ. ಇದು ಸಖತ್ ಟ್ರೋಲ್ ಆಗಿದೆ.

rashmika mandanna

ಅಂದಹಾಗೆ ‘ಗಿಲ್ಲಿ’ ತೆಲುಗಿನ ‘ಒಕ್ಕಡು’ ಚಿತ್ರದ ರೀಮೆಕ್. ಮಹೇಶ್ ಬಾಬು ನಟಿಸಿದ ‘ಪೋಕಿರಿ’ ಚಿತ್ರವನ್ನು ಕೂಡ ‘ಪೋಕಿರಿ’ ಹೆಸರಿನಲ್ಲಿ ತಮಿಳಿಗೆ ವಿಜಯ್ ರೀಮೆಕ್ ಮಾಡಿದ್ದರು. ಇದನ್ನೇ ಹೇಳುವ ಭರದಲ್ಲಿ ‘ಪೋಕಿರಿ’ ರೀಮೆಕ್ ‘ಗಿಲ್ಲಿ’ ಎಂದಿದ್ದಾರೆ. ಮಹೇಶ್ ಬಾಬು ಮತ್ತು ವಿಜಯ್ ಇಬ್ಬರ ಜೊತೆಯೂ ನಟಿಸಿದರೂ ಕೂಡ ಸಿನಿಮಾದ ಬಗ್ಗೆ ಜ್ಞಾನ ಇಲ್ವಾ? ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ.

rashmika mandanna 1

ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೇಳಿಕೆಗೆ ಟೀಕೆ, ಟ್ರೋಲ್ ವ್ಯಕ್ತವಾಗುತ್ತಿದ್ದಂತೆ ನಟಿ ಎಚ್ಚೆತ್ತುಕೊಂಡಿದ್ದಾರೆ. ನಟಿ ಕ್ಷಮೆಯಾಚಿಸಿದ್ದಾರೆ. ಹೌದು, ಗೊತ್ತು ನನಗೆ. ಒಂದು ಮಿಸ್ಟೇಕ್ ಆಗಿಬಿಟ್ಟಿದೆ. ಸಂದರ್ಶನ ಮುಗಿದ ಬಳಿಕ ‘ಗಿಲ್ಲಿ’ ಸಿನಿಮಾ `ಒಕ್ಕಡು’ ರೀಮೆಕ್ ಎಂದು ನನಪಾಯ್ತು, ಕ್ಷಮಿಸಿ ತಪ್ಪಾಯ್ತು ಎಂದು ಕ್ಷಮೆಕೋರಿದ್ದಾರೆ.

Share This Article