ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ..!

Public TV
2 Min Read
RAKSHITH RASHMIKA

ಬೆಂಗಳೂರು: ಎಂಗೇಜ್‍ಮೆಂಟ್ ಆಗಿ ಬ್ರೇಕಪ್ ಮಾಡಿಕೊಂಡ ರಕ್ಷಿತ್-ರಶ್ಮಿಕಾ ಜೋಡಿ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಮೂಲಕ ಅವರು ತಮ್ಮ ತಮ್ಮ ಅಭಿಮಾನಿಗಳ ಹಾರ್ಟನ್ನೂ ಬ್ರೇಕ್ ಮಾಡಿದ್ದರು. ಆದ್ರೆ ಸರ್ಪ್ರೈಸ್ ಅಂದ್ರೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ.

ಹೌದು. ರಶ್ಮಿಕಾ ಅವರು 2018ರ ಡಿಸೆಂಬರ್ 30ರಂದು ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 2017-18ನೇ ಇಸವಿಯಲ್ಲಿ ಜೊತೆಯಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಗೆಳೆಯರ ಜೊತೆಗಿನ ಫೋಟೋಗಳನ್ನು ಕೊಲಾಜ್ ಮಾಡಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

rashmika rakshit

ಅಚ್ಚರಿ ಅಂದ್ರೆ ಕಿರಿಕ್ ಪಾರ್ಟಿ ತಂಡ ಮತ್ತು ತಾವು ಇದುವರೆಗೆ ನಟಿಸಿದ ಚಿತ್ರಗಳ ಸ್ಟಾರ್ ಗಳ ಜತೆಗಿನ ಸುಂದರ ಕ್ಷಣಗಳ ಜೊತೆಗೆ ರಕ್ಷಿತ್ ಶೆಟ್ಟಿಯವರ ಫೋಟೋವನ್ನೂ ಕೂಡ ಪ್ರಕಟಿಸಿದ್ದಾರೆ. “2 ವರ್ಷದ ನನ್ನ ನೆನಪುಗಳು” ಅಂತ ಬರೆದುಕೊಂಡಿದ್ದಾರೆ.

ರಶ್ಮಿಕಾ ಹೇಳಿದ್ದು ಏನು?
ಸಿನಿಮಾ ಜಗತ್ತಿಗೆ ಬಂದು ಎರಡು ವರ್ಷವಾಗಿದೆ ಹಾಗೂ ಸಮಯ ಕೂಡ ತುಂಬಾ ಬೇಗ ಮುಂದೆ ಸಾಗಿದೆ. ನನ್ನ ಜೀವನದಲ್ಲಿ ನನ್ನನ್ನು ನಾನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ಅಲ್ಲದೇ ಸಾಕಷ್ಟು ಜನರನ್ನು ಭೇಟಿ ಮಾಡಿ ಅವರನ್ನು ನಗಿಸಬೇಕು ಹಾಗೂ ನನಗೆ ಖುಷಿಯಾಗುವ ಕೆಲಸಗಳನ್ನು ಮಾಡಬೇಕು.

ನಾನು ಈಗ ನನ್ನ ಕನಸುಗಳಲ್ಲಿ ಬದುಕುತ್ತಿದ್ದೇನೆ. ಈ ಎರಡು ವರ್ಷದಲ್ಲಿ ನನಗೆ ಸಾಕಷ್ಟು ಜನರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ಕೆಲವರ ಜೊತೆ ಕೆಲಸ ಮಾಡಿದ್ದೇನೆ. ಕೆಲವರ ಜೊತೆ ಮಾತನಾಡಿದ್ದೇನೆ. ಕೆಲವರ ಜೊತೆ ಡ್ಯಾನ್ಸ್ ಮಾಡಿದರೆ, ಮತ್ತೆ ಹಲವರ ಜೊತೆ ನಕ್ಕಿದ್ದೇನೆ. ನಾನು ಏನು ಮಾಡಬೇಕೆಂದು ಅಂದುಕೊಂಡಿದ್ದೇನೋ ಅದನ್ನು ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತಸವಿದೆ. ನಾನು ಹೇಗೆ ಇದ್ದೇನೋ ಹಾಗೆಯೇ ನನ್ನನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಈ ದಿನ ನನಗೆ ಯಾವಾಗಲೂ ಸ್ಪೆಷಲ್ ಆಗಿರುತ್ತದೆ. 2018 ಕೂಡ ಮುಗಿದಿದ್ದು, ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾಗಿ ಎರಡು ವರ್ಷವಾಗಿದೆ. ಎಲ್ಲ ಅದ್ಭುತ ಕ್ಷಣಗಳು ನನಗೆ ಒಂದೇ ದಿನದಲ್ಲಿ ದೊರೆತಿದೆ.

rashmika

ಕಿರಿಕ್ ಪಾರ್ಟಿ ಚಿತ್ರ ನನಗೆ ಯಾವಾಗಲೂ ಸೂಪರ್ ಸ್ಪೆಶಲ್ ಆಗಿರುತ್ತದೆ. ಎಲ್ಲವೂ ನನಗೆ ಈಗಲೂ ನೆನಪಿದೆ ಪ್ರತಿದಿನ ನಿನ್ನೆ ಇದ್ದ ಹಾಗೆ ನನಗೆ ಅನಿಸುತ್ತಿದೆ. ಆ ದಿನದ ಕ್ಷಣಗಳನ್ನು ನಾನು ಹೇಳಲು ಇಷ್ಟಪಡುತ್ತೇನೆ. ಈ ಎರಡು ವರ್ಷದಲ್ಲಿ ಇನ್‍ಸ್ಟಾಗ್ರಾಂನಲ್ಲಿ 17 ಲಕ್ಷ ಹಾಗೂ ಟ್ವಿಟ್ಟರಿನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಆಗಿದ್ದು, ಈ ನನ್ನ ಎರಡು ವರ್ಷ ಸ್ಪೆಷಲ್ ಆಗಿ ಮಾಡಿದ್ದಕ್ಕೆ ಎಲ್ಲರಿಗೂ ನಾನು ವಿಶೇಷವಾಗಿ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *