ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಚಿತ್ರದ ಸಕ್ಸಸ್ ನಂತರ ಕೊಡಗಿನ ಕುವರಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ, ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಮಾರಿಗೋಲ್ಡ್’ ಹಿಂದೆ ಬಿದ್ದ ಸಂಗೀತಾ ಶೃಂಗೇರಿ: ಮಜವಾಗಿದೆ ಟೀಸರ್
ರಣ್ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಮೂವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಅನಿಮಲ್ ಪಾರ್ಟ್ 2ಗೂ ತಯಾರಿ ಮಾಡ್ತಿದ್ದಾರೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್
ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಒಂದು ಚಿತ್ರಕ್ಕೆ 2-3 ಕೋಟಿ ರೂ. ಚಾರ್ಜ್ ಮಾಡುತ್ತಿದ್ದ ನಟಿ ಈಗ 4 ರಿಂದ 5 ಕೋಟಿ ರೂ.ವರೆಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Says who I wonder ????????♀️.. after seeing all of this I think I should actually consider it.. and if my producers ask why.. then I’ll just say ‘media out there is saying this sir.. and I think I should live up to their words.. what do I do?’ ????????????♀️
— Rashmika Mandanna (@iamRashmika) February 6, 2024
ಈ ಸುದ್ದಿ ರಶ್ಮಿಕಾ ಗಮನಕ್ಕೂ ಬಂದಿದ್ದು, ಇದೆಲ್ಲವನ್ನೂ ನೋಡಿದ ನಂತರ ನಾನು ಅದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಿರ್ಮಾಪಕರು ಕೇಳಿದರೆ, ಆಗ ನಾನು ಹೇಳುತ್ತೇನೆ ಕೆಲ ಮಾಧ್ಯಮಗಳು ಇದನ್ನು ಹೇಳುತ್ತಿವೆ ಸರ್. ನಾನು ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಯೋಚಿಸಿದ್ದೇನೆ. ನಾನೇನು ಮಾಡಲಿ? ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ 4ರಿಂದ 5 ಕೋಟಿ ರೂ. ಕೊಟ್ಟರೆ ಸಿನಿಮಾ ಮಾಡ್ತೀನಿ ಎಂಬ ಅರ್ಥದಲ್ಲಿ ನಟಿ ಮಾತನಾಡಿದ್ದಾರೆ.
ಇದೀಗ ರಶ್ಮಿಕಾ ಮಂದಣ್ಣ ಕೈಯಲ್ಲಿ ಪುಷ್ಪ 2, ಅನಿಮಲ್ 2, ರೈನ್ಬೋ, ಗರ್ಲ್ಫ್ರೆಂಡ್, ಚಾವಾ, ಸೇರಿದಂತೆ ಹಲವು ಸಿನಿಮಾಗಳಿವೆ.