Tuesday, 20th November 2018

Recent News

ರಕ್ಷಿತ್ ನಂತ್ರ ಟಾಲಿವುಡ್ ನಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಆಗಿದ್ದಾರೆ. ಆದರೆ ಇದೀಗ ರಶ್ಮಿಕಾಗೆ ಟಾಲಿವುಡ್‍ನಲ್ಲಿ ಮತ್ತೊಮ್ಮೆ ಪ್ರೀತಿ ಹುಟ್ಟಿದೆ.

ರಶ್ಮಿಕಾ ಮಂದಣ್ಣ ಟಾಲಿವುಡ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಒಂದಲ್ಲ- ಒಂದು ತೆಲುಗು ಸಿನಿಮಾದಿಂದ ಸುದ್ದಿ ಮಾಡುತ್ತಲೇ ಇದ್ದಾರೆ. ಇದೀಗ ಪ್ರೀತಿ ವಿಷಯಕ್ಕೆ ಕಿರಿಕ್ ಬೆಡಗಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾಗೆ ಮತ್ತೆ ಪ್ರೀತಿಯಾಗಿದೆ. ಹೀಗಂತ ತೆಲುಗು ವೆಬ್‍ಸೈಟ್‍ಗಳಲ್ಲಿ ಸುದ್ದಿಯಾಗುತ್ತಿದೆ.

ಪ್ರೀತಿ ಎಲ್ಲಿ, ಯಾವಾಗ, ಹೇಗೆ ಯಾರ ಮೇಲೆ ಹುಟ್ಟುತ್ತೋ ಇಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಕರ್ನಾಟಕ ಕ್ರಶ್ ರಶ್ಮಿಕಾ ಮನದಲ್ಲಿ ಹೊಸ ಪ್ರೀತಿ ಚಿಗುರಿದೆ. ಈ ವಿಷಯ ಕೇಳಿದ ಮೇಲೆ ರಶ್ಮಿಕಾ ಹಾಗೂ ರಕ್ಷಿತ್ ಅಭಿಮಾನಿಗಳಿಗೆ ಅರೆಕ್ಷಣ ಶಾಕ್ ಆಗಿರುತ್ತೆ. ಆದರೆ ರಶ್ಮಿಕಾಗೆ ಪ್ರೀತಿ ಆಗಿರುವುದು ಮನುಷ್ಯರ ಮೇಲೆ ಅಲ್ಲ ಎನ್ನುವುದು ಕುತೂಹಲಕಾರಿ.

ರಶ್ಮಿಕಾಗೆ ಕ್ರಿಕೆಟ್ ಮೇಲೆ ಲವ್ ಆಗಿದ್ದು, ವಿಜಯ್ ದೇವರಕೊಂಡ ನಾಯಕರಾಗಿರುವ `ಡಿಯರ್ ಕಾಮ್‍ರೇಡ್’ ಸಿನಿಮಾವೊಂದರಲ್ಲಿ ರಶ್ಮಿಕಾ ತೆಲಂಗಾಣ ಕ್ರಿಕೆಟ್ ಪ್ಲೇಯರ್ ಆಗಿ ಕಾಣಿಸಿಕೊಳುತ್ತಿದ್ದಾರೆ. ಹೀಗಾಗಿ ಹೈದರಬಾದ್ ಕ್ರಿಕೆಟ್ ಕ್ಲಬ್‍ನಲ್ಲಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *