ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳಿರುವ ನಡುವೆ ಸಹನಟ ಅಲ್ಲು ಅರ್ಜುನ್‌ಗೆ ‘ಪುಷ್ಪ 2’ (Pushpa 2) ಬಿಡುಗಡೆಗೂ ಮುನ್ನವೇ ಸ್ಪೆಷಲ್ ಗಿಫ್ಟ್‌ವೊಂದನ್ನು ನೀಡಿದ್ದಾರೆ. ಇದನ್ನೂ ಓದಿ:400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ
Advertisement
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ. ಇದೀಗ ಸಿನಿಮಾ ರಿಲೀಸ್‌ಗೂ ಮುನ್ನವೇ ವಿಶೇಷ ಗಿಫ್ಟ್‌ವೊಂದನ್ನು ಅಲ್ಲು ಅರ್ಜುನ್‌ಗೆ ರಶ್ಮಿಕಾ ನೀಡಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ ಬೆಳ್ಳಿ ನಾಣ್ಯವೊಂದನ್ನು ಉಡುಗೊರೆಯಾಗಿ ನಟನಿಗೆ ಕೊಟ್ಟಿದ್ದಾರೆ.
Advertisement
Advertisement
ಬೆಳ್ಳಿಯನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದ್ರೆ ಅವರಿಗೆ ಅದೃಷ್ಟ ಬರುತ್ತದೆ ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದರು. ನಿಮಗೆ ಹೆಚ್ಚಿನ ಅದೃಷ್ಟವನ್ನು ತರಲಿ ಎಂದು ನಾನು ಭಾವಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ರಶ್ಮಿಕಾ ಬರೆದು ಕಳುಹಿಸಿದ್ದಾರೆ. ಬೆಳ್ಳಿಯ ನಾಣ್ಯದ ಜೊತೆ ಸಿಹಿ ತಿನಿಸುಗಳನ್ನು ನಟಿ ಕಳುಹಿಸಿದ್ದಾರೆ.
Advertisement
ರಶ್ಮಿಕಾ ಕಳುಹಿಸಿದ ಗಿಫ್ಟ್ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಲ್ಲು ಅರ್ಜುನ್ ಥ್ಯಾಂಕ್ಯೂ ಎಂದಿದ್ದಾರೆ. ಈಗ ನನಗೆ ಹೆಚ್ಚು ಅದೃಷ್ಟ ಬೇಕು ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ನಟಿ, ರಿಲೀಸ್ ಬಳಿಕ ‘ಪುಷ್ಪ 2’ ಚಿತ್ರ ಖಂಡಿತವಾಗಿಯೂ ಸದ್ದು ಮಾಡುತ್ತೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಮ್ಮ ಕೆಲಸವನ್ನು ಪ್ರೇಕ್ಷಕರು ಗುರುತಿಸುತ್ತಾರೆ. ಈ ವಿಷ್ಯದಲ್ಲಿ ನನಗೆ ನಂಬಿಕೆಯಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಪುಷ್ಪರಾಜ್ ಮತ್ತು ಶ್ರೀವಲ್ಲಿಯ ತೆರೆಹಿಂದಿನ ಸಂಭಾಷಣೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.