ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ

Public TV
1 Min Read
Rashmika Mandanna 1 1

ನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಡಿಮ್ಯಾಂಡ್‌ನಲ್ಲಿರುವ ನಾಯಕಿ. ದಿನದಿಂದ ದಿನಕ್ಕೆ ರಶ್ಮಿಕಾ ಫ್ಯಾನ್ ಬೇಸ್ ಹಿರಿದಾಗುತ್ತಲೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ.

rashmika mandanna 5

ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ವೃತ್ತಿ ಬದುಕಿಗೆ ಶುರು ಮಾಡಿದ ನಟಿ ಇಂದು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬೇಡಿಕೆಯ ನಟಿಯಾಗಿ ಸದ್ದು ಮಾಡ್ತಿದ್ದಾರೆ.

rashmika

ಈ ಕಾಂಟ್ರವರ್ಸಿ ಲೇಡಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಜನಪ್ರಿಯತೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದೀಗ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ 38 ಮಿಲಿಯನ್ ರೀಚ್ ಆಗಿದೆ. ಈ ಮೂಲಕ ಹೊಸ ದಾಖಲೆಯನ್ನ ಶ್ರೀವಲ್ಲಿ ಬರೆದಿದ್ದಾರೆ. 38 ಮಿಲಿಯನ್ ಅಂದ್ರೆ 3.8 ಕೋಟಿ ಹಿಂಬಾಲಕರನ್ನ ನಟಿ ಹೊಂದಿದ್ದಾರೆ. ಇದನ್ನೂ ಓದಿ:ಬ್ರಾ ಧರಿಸದೇ ಬಂದ ನಟಿ ಇಶಾ ಗುಪ್ತಾ ಟ್ರೋಲ್

rashmika mandanna 6

ಇನ್ನೂ ಬಾಲಿವುಡ್‌ನಲ್ಲಿ ರಶ್ಮಿಕಾ ನಟಿಸಿರುವ ಸಿನಿಮಾ ಸೋತಿದ್ದರು ಕೂಡ ಅವರಿಗೆ ಬೇಡಿಕೆಯಿದೆ. ಇದೀಗ ವಿಕ್ಕಿ ಕೌಶಲ್ ಜೊತೆ ಮರಾಠ ಸಾಮ್ರಾಜ್ಯದ ರಾಣಿಯ ಪಾತ್ರದಲ್ಲಿ ನಟಿಸಲು ರಶ್ಮಿಕಾಗೆ ಬುಲಾವ್ ಬಂದಿದೆ. ತೆಲುಗಿನ ರೈನ್‌ಬೋ, ಪುಷ್ಪ 2, ಅನಿಮಲ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿದೆ.

Share This Article