ನ್ಯಾಷನಲ್ ಫಿಲ್ಮ್ ಅವಾರ್ಡ್ 2023 (National Film Award 2023) ಅನೌನ್ಸ್ ಆಗಿದ್ದು, ಪರಭಾಷೆಯ ಸಿನಿಮಾಗಳಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಶುಭಕೋರಿದ್ದಾರೆ. ಕನ್ನಡ ಸಿನಿಮಾ ಬಿಟ್ಟು, ಪರಭಾಷೆ ಚಿತ್ರಕ್ಕೆ ನಟಿ ಶುಭಕೋರಿದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ಕನ್ನಡ ಚಿತ್ರದಿಂದ ಕೆರಿಯರ್ ಶುರು ಮಾಡಿ, ಈಗ ಸೌತ್-ಬಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಡೆಯನ್ನ ನೆಟ್ಟಿಗರು ಖಂಡಿಸಿದ್ದಾರೆ. ಸಹನಟ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ 777 ಚಾರ್ಲಿಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಅಂತಾ ನ್ಯಾಷನಲ್ ಅವಾರ್ಡ್ ಒಲಿದು ಬಂದಿದೆ. ಆದರೆ ಕನ್ನಡ ಸಿನಿಮಾವನ್ನ ಕಡೆಗಣಿಸಿ ಪರಭಾಷೆಯ ಸಿನಿಮಾಗಳಿಗೆ ನಟಿ ಭೇಷ್ ಎಂದಿದ್ದಾರೆ. ಇದನ್ನೂ ಓದಿ:Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಚಾರ್ಲಿ 777 ಅತ್ಯುತ್ತಮ ಪ್ರಾದೇಶಿಕ ಚಿತ್ರ
ತಾವು ನಟಿಸಿರುವ ‘ಪುಷ್ಪ’ (Pushpa) ಸಿನಿಮಾದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಪ್ರಶಸ್ತಿ ಒಲಿದು ಬಂದಿದೆ. ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಶೇರ್ಷಾ ಸಿನಿಮಾಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ. ಬೆಸ್ಟ್ ನಟಿ ಅವಾರ್ಡ್ ‘ಗಂಗೂಬಾಯಿ ಕಾಥಿಯಾವಾಡಿ’ ನಟನೆಗೆ ಆಲಿಯಾ ಭಟ್, ‘ಮಿಮಿ’ ಚಿತ್ರದ ನಟನೆಗೆ ಕೃತಿ ಸನೋನ್ ಗೆದ್ದಿದ್ದು ವಿಶ್ ಮಾಡಿದ್ದಾರೆ. ತಮ್ಮ ಸಹನಟ ಪುಷ್ಪ ಹೀರೋ ಅಲ್ಲು ಅರ್ಜುನ್‌ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಸಿಕ್ಕಿದೆ. ಅಲ್ಲು ಅರ್ಜುನ್‌ಗೆ (Allu Arjun) ರಶ್ಮಿಕಾ ಮಂದಣ್ಣ (Rashmika Mandanna) ಹಾರೈಸಿ, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಆದರೆ ಕನ್ನಡತಿಯಾಗಿ ಕನ್ನಡ ಸಿನಿಮಾ ನ್ಯಾಷನಲ್ ಅವಾರ್ಡ್ ಪಡೆದಿದ್ರು ರಶ್ಮಿಕಾ ವಿಶ್ ಮಾಡದೇ ಇರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ನಟಿಸಿದ್ರು.



